ಹರಿಹರ: ನಗರದ ಪ್ರಭಾಕರ್ ಫರ್ನೀಚರ್ ಹಾಗೂ ಮಮತಾ ವಾಚ್ ಶಾಪ್ ನಲ್ಲಿ ನಿನ್ನೆ ತಡರಾತ್ರಿ ಆಕಸ್ಮಿಕ ಬೆಂಕಿ ಬಿದ್ದಿದ್ದು, ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸುಟ್ಟು ಹೋಗಿವೆ. ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಶಿವಮೊಗ್ಗ ರಸ್ತೆಯಲ್ಲಿರುವ ಪ್ರಭಾಕರ್ ಫರ್ನೀಚರ್ ಹಾಗೂ ಮಮತಾ ವಾಚ್ ಶಾಪ್ ನಲ್ಲಿ ಶಾರ್ಟ್ ಸರ್ಕೀಟ್ ಆಗಿದ್ದು, ಬೆಂಕಿ ಎರಡು ಅಂಗಡಿಯನ್ನು ಆವರಿಸಿಕೊಂಡಿದೆ. ಬೆಂಕಿಗೆ ಅಂಡಿಯಲ್ಲಿದ್ದ ಲಕ್ಷಾಂತರ ಮೌಲ್ಯದ ಪೀಠೋಪರಣ ಹಾಗೂ ಅಪಾರ ಮೌಲ್ಯದ ವಾಚ್‌ಗಳು ಆಹುತಿಯಾಗಿವೆ.
ಸ್ಥಳೀಯರು ಮಾಹಿತಿ ನೀಡಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.



