ದಾವಣಗೆರೆ: ಜಿಲ್ಲೆಯ ಹರಿಹರ ನಗರದಲ್ಲಿ ಬ್ಯಾಂಕ್ ನಿಂದ ಹಣ ಬಿಡಿಸಿಕೊಂಡು ಬರುವ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ದರೋಡೆ ಮಾಡುತ್ತಿದ್ದ ತಮಿಳುನಾಡು ಮೂಲದ ಆರೋಪಿಯನ್ನು ಪೊಲೀಸರು ಬಂಧನ ಮಾಡಿದ್ದು, ಆರೋಪಿಯಿಂದ 2,50,000 ರೂ. ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ.
ಹರಿಹರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಹರ ನಗರದ ಹಳೇ ಪಿ.ಬಿ ರಸ್ತೆಯ ಪಕ್ಕದಲ್ಲಿರುವ ಎಸ್.ಬಿ.ಐ ಬ್ಯಾಂಕ್ ನಿಂದ ಬಿರ್ಲಾ ನಿವೃತ್ತ ನೌಕರ ಕಳಿದಾಸ ನಗರದ ರಾಮಂಚಂದ್ರಪ್ಪ ಅರಳಿಕಟ್ಟಿ, ತಂದೆ ನಾಗಪ್ಪ(70) SBI ಬ್ಯಾಂಕಿನ ತಮ್ಮ ಖಾತೆಯಿಂದ 6,00,000 (ಆರು ಲಕ್ಷ) ರೂಪಾಯಿಗಳನ್ನು
ಬಿಡಿಸಿಕೊಂಡು ಬೈಕ್ ಸೈಡ್ ಬಾಗ್ ನಲ್ಲಿ ಇಟ್ಟುಕೊಂಡು ಹೋಗುವಾಗ ತಮಿಳುನಾಡು ರಾಜ್ಯದ ಆರೋಪಿ ಮಧನ್ ಗಮನಕ್ಕೆ ಬಾರದಂತೆ ಕಳ್ಳತನ ಮಾಡಿಕೊಂಡು
ಹೋಗಿದ್ದನು.
ದಿನಾಂಕ: 15-07-2024 ರಂದು ಪುನಃ ಕಳ್ಳತನ ಮಾಡಲು ಬಂದಾಗ ಹರಿಹರ ನಗರ ಪೊಲೀಸರು ಆರೋಪಿತನನ್ನು ಹಿಡಿದು ವಿಚಾರಣೆ ಮಾಡಿದಾಗ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಲು ಬಂದಿದ್ದಾಗಿ ಒಪ್ಪಿಕೊಂಡಿದ್ದಾನೆ. ಸುಮಾರು ಮೂರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ಕಳ್ಳತನ ಮಾಡಿದಾಗಿ ಒಪ್ಪಿಕೊಂಡಿದ್ದರಿಂದ ಆತನಿಂದ ರೂಪಾಯಿ 2,50,000/- ನಗದು ಹಣವನ್ನು ವಶಪಡಿಸಿಕೊಂಡಿರುತ್ತದೆ.
ಕಳ್ಳತನ ಮಾಡಿದ ಆರೋಪಿತನನ್ನು ಪತ್ತೆ ಮಾಡಲು ಡಿವೈಎಸ್ಪಿ ಬಸವರಾಜ ಬಿ.ಎಸ್ ಮಾರ್ಗದರ್ಶನದಲ್ಲಿ ತನಿಖಾಧಿಕಾರಿ ಪಿ.ಐ
ಎಸ್. ದೇವಾನಂದ ನೇತೃತ್ವದ ಪಿಎಸ್ ಐ ವಿಜಯ್.ಜಿ.ಎಸ್ , ಶ್ರೀಪತಿ ಗಿನ್ನಿ, ಎಎಸ್ ಐ ಮೈಕಲ್ ಆಂಥೋನಿ ಮತ್ತು ಸಿಬ್ಬಂದಿ ನಾಗರಾಜ ಸುಣಗಾರ, ರವಿ ಆರ್, ಸಿದ್ದೇಶ್.ಹೆಚ್, ಹೇಮಾನಾಯ್. ಬಿ.ಎಸ್ , ರುದ್ರಸ್ವಾಮಿ.ಕೆ.ಸಿ, ಹನುಮಂತ ಗೋಪನಾಳ, ಸತೀಶ್.ಟಿ.ವಿ, ಚಾಲಕ ರಂಗನಾಥ್ ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ರಾಘವೇಂದ್ರ, ಶಾಂತರಾಜ್, ಹಾಗೂ ಜಿಲ್ಲಾಅಪರಾಧ ಪತ್ತೆ ತಂಡದ ಮಜೀದ್, ರಾಘವೇಂದ್ರ, ಆಂಜಿನೇಯ, ರಮೇಶ ನಾಯ್ಕ, ಬಾಲಾಜಿ ಒಳಗೊಂಡ ತಂಡವು ಆರೋಪಿತನನ್ನು ಪತ್ತೆ ಮಾಡಿ ಮಾಲನ್ನು ವಶಪಡಿಸಿಕೊಳ್ಳಲಾಗಿದೆ.
ಕಾರ್ಯಾಚರಣೆ ನಡೆಸಿದ ತಂಡಕ್ಕೆ ಉಮಾ
ಪ್ರಶಾಂತ, ಎಎಸ್ಪಿಗಳಾದ ವಿಜಯಕುಮಾರ್ ಸಂತೋಷ ಹಾಗೂ ಮಂಜುನಾಥ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.



