ದಾವಣಗೆರೆ: ಜಿಲ್ಲೆಯ ಹರಿಹರ ನಗರದ ವೈದ್ಯ ಡಾ.ಸಚಿನ್ ಬೊಂಗಾಳೆ ಅವರ ಮನೆಯಲ್ಲಿ ಕಳ್ಳರು ಕೈಚಳಕ ಮಾಡಿದ್ದು, 22.75 ಲಕ್ಷ ಮೌಲ್ಯದ ನಗದು, ಚಿನ್ನಾಭರಣವನ್ನು ದೋಚಿ ಪರಾರಿಯಾಗಿದ್ದಾರೆ.
ಹರಿದ ಜೆ.ಸಿ. ಬಡಾವಣೆಯ ಮನೆಯಲ್ಲಿ ಈ ಘಟನೆ ನಡೆದಿದೆ.ಸಚಿನ್ ಬೊಂಗಾಳೆ ಅವರು ಆ.11ರಂದು ಕುಟುಂಬ ಸಮೇತ ಬೆಳಗಾವಿಗೆ ಹೋಗಿದ್ದರು. ಆ.13 ರಂದು ರಾತ್ರಿ ವಾಪಸಾದಾಗ ಕಳ್ಳತನ ನಡೆದಿರುವುದು ಗೊತ್ತಾಗಿದೆ. ಈ ಬಗ್ಗೆ ಹರಿಹರ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸ್ಥಳಕ್ಕೆ ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚು ನಿವಾಸಗಳಿರುವ ಜೆ.ಸಿ. ಬಡಾವಣೆಯಲ್ಲಿ ನಡೆದ ಈ ಘಟನೆಯಿಂದ ಜನರು ಆತಂಕಗೊಂಡಿದ್ದಾರೆ.



