ದಾವಣಗೆರೆ: ನಾಲ್ಕು ಕಳ್ಳತನ ಪ್ರಕರಣಗಳನ್ನು ಭೇದಿಸಿದ ಜಿಲ್ಲಾ ಪೊಲೀಸರು, 5.85 ಲಕ್ಷ ರೂ. ಮೌಲ್ಯದ ಆಭರಣಗಳು, 9 ಮೊಬೈಲ್, 9 ಕುರಿಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ಬಂಧಿಸುವಲ್ಲಿ ಹರಿಹರ ನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣಗಳಲ್ಲಿನ ಆರೋಪಿಗಳು ಹಾಗೂ ಸ್ವತ್ತು ಪತ್ತೆಗಾಗಿ ಎಎಸ್ಪಿ
ವಿಜಯಕುಮಾರ ಎಂ ಸಂತೋಷ್, ಜಿ ಮಂಜುನಾಥ, ಡಿವೈಎಸ್ಪಿ ಬಸವರಾಜ್ ಬಿ ಎಸ್ ಮಾರ್ಗದರ್ಶನದಲ್ಲಿ ಇನ್ಸ್ ಪಕ್ಟರ್ ದೇವಾನಂದ ನೇತೃತ್ವದ ತಂಡವನ್ನು ರಚಿಸಿಕೊಂಡು ನಾಲ್ಕು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ 1
ಸೋಹಿತ್ ಎನ್.ಜಿ ಎಂಬುವವರು ತಮ್ಮ ಪ್ಲಿಪ್ ಕಾರ್ಟ್ ಗೋಡೌನ್‌ನಲ್ಲಿ ಮೊಬೈಲ್‌ಗಳ ಕಳ್ಳತನವಾದ ಬಗ್ಗೆ ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹರಿಹರ ನಗರದ ಪವನ್ ಜೆ ಎಂಬ ಆರೋಪಿಯನ್ನು ಬಂಧಿಸಿ, 1.66 ಲಕ್ಷ ರೂ ಬೆಲೆಯ 9 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ 2
ರೇಷ್ಮಾಭಾನು ಎಂಬುವವರು ತಮ್ಮ ಮನೆಯಲ್ಲಿ ಕಳ್ಳತನವಾದ ಬಗ್ಗೆ ಹರಿಹರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರಾವತಿ ತಾಲ್ಲೂಕಿನ ಸೀಗೆಬಾವಿಯ ದಾದಾಪೀರ್ ಎಂಬ ಆರೋಪಿಯನ್ನು ಬಂಧಿಸಿ, 2.18 ಲಕ್ಷ ರೂ ಬೆಲೆಯ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ 3
ಅಪರಾಧ ವಿಭಾಗದ ಪೊಲೀಸರು ಗಸ್ತಿನಲ್ಲಿದ್ದಾಗ ಅನುಮಾನಾಸ್ಪದವಾಗಿ ಕಂಡು ಬಂದ ಶಿವಮೊಗ್ಗದ ನಾಲ್ಕು ಜನರನ್ನು ವಶಕ್ಕೆ ಪಡೆದುವಿಚಾರಣೆ ಮಾಡಿದಾಗ ಅವರ ಬಳಿ ಇದ್ದ 03ಕುರಿಗಳನ್ನು ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆ ವ್ಯಾಪ್ತಿಯಿಂದ ಕಳ್ಳತನ ಮಾಡಿಕೊಂಡು ಬಂದಿರುವುದಾಗಿ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ಮನು.ಆರ್,ಜಗನ್ನಾಥ. ಎಸ್, ಅಬ್ರಾರ್, ಸುಹೇಲ್ ಖಾನ್ ಇವರನ್ನು ಬಂಧಿಸಿ, 60 ಸಾವಿರ ರೂ ಬೆಲೆಯ 3 ಕುರಿಗಳನ್ನು ವಶಕ್ಕೆ ಪಡೆದಿದ್ದಾರೆ.
ಪ್ರಕರಣ 4
ರಾಣಿ ಡಿಕ್ಸನ್ ಎಂಬುವವರು ತಮ್ಮ ಮನೆಯಲ್ಲಿ ಕಳ್ಳತನವಾದ ಬಗ್ಗೆ ಹರಿಹರ ಠಾಣೆಯಲ್ಲಿ ದೂರು ನೀಡಿದ್ದರು. ಈ ಪ್ರಕರಣಕ್ಕೆ
ಸಂಬಂಧಿಸಿದಂತೆ ಹರಿಹರ ನಗರದ ಜಾನ್ಸನ್ ಸಿಜೆ ಎಂಬ ಆರೋಪಿಯನ್ನು ಬಂಧಿಸಿ 1.1 ಲಕ್ಷ ರೂ ಬೆಲೆಯ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಪತ್ತೆಕಾರ್ಯದಲ್ಲಿ ಭಾಗಿಯಾಗಿದ್ದ ಪಿ.ಎಸ್.ಐ ಜಿ.ಎಸ್.ವಿಜಯ್, ಶ್ರೀಪತಿ ಗಿನ್ನಿ, ಅಪರಾಧ ವಿಭಾಗ ಸಿಬ್ಬಂದಿಗಳಾದ ನಾಗರಾಜ ಸುಣಗಾರ, ಸಿದ್ದೇಶ.ಹೆಚ್, ರವಿ.ಆರ್, ರುದ್ರಸ್ವಾಮಿ.ಕೆ.ಸಿ,
ಹನುಮಂತ.ಎಸ್.ಗೋಪನಾಳ, ರವಿನಾಯ್ಕ, ಸಿದ್ದರಾಜು, ರವಿ.ಕೆ, ರಂಗನಾಥ, ಜಿಲ್ಲಾ ಪೊಲೀಸ್ ಕಚೇರಿಯ ರಾಮಚಂದ್ರ ಜಾದವ್, ಶಿವಕುಮಾರ,ರಮೇಶ ಇವರುಗಳನ್ನು ಎಸ್ಪಿ ಉಮಾ ಪ್ರಶಾಂತ್
ಪ್ರಶಂಸಿಸಿದ್ದಾರೆ.