ದಾವಣಗೆರೆ: ಹಳ್ಳದ ಚೆಕ್‌ಡ್ಯಾಂನಲ್ಲಿ ಈಜಾಡಲು ಹೋಗಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಿಹರ ತಾಲ್ಲೂಕಿನ ಬಾನುವಳ್ಳಿ ಗ್ರಾಮದ ಬಳಿ ನಡೆದಿದೆ.
ದಾವಣಗೆರೆ; ನ್ಯಾಮತಿ SBI ಬ್ಯಾಂಕ್ ನ 22 ಕೆಜಿ ಚಿನ್ನ ದರೋಡೆ ಪ್ರಕರಣ; ಐವರು ಆರೋಪಿಗಳ ಬಂಧನ
ಬಾನುವಳ್ಳಿ ಗ್ರಾಮದ 9ನೇ ತರಗತಿ ವಿದ್ಯಾರ್ಥಿ ಮೊಹ್ಮದ್ ತನ್ವೀರ್ (13) ಮೃತಪಟ್ಟ ಬಾಲಕ.ಗ್ರಾಮ ಸಮೀಪದ ರಾಯಪುರ ರಸ್ತೆಯಲ್ಲಿರುವ ದೊಡ್ಡಹಳ್ಳದ ಚೆಕ್‌ಡ್ಯಾಂನಲ್ಲಿ ಈಜಾಡಿ ಹೋಗಿದ್ದ ತನ್ವೀರ್ ಮನೆಗೆ ಮರಳಿರಲಿಲ್ಲ. ಆತಂಕಗೊಂಡ ಷೋಷಕರು ಹಳ್ಳಕ್ಕೆ ಈಜುಗಾರರೊಂದಿಗೆ ಹೋಗಿ ಹುಡುಕಾಡಿದಾಗ ಶವ ಪತ್ತೆಯಾಗಿದೆ. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಪ್ರಿಲ್ 2 ರಂದು ದಾವಣಗೆರೆ ವಿವಿ 12ನೇ ಘಟಿಕೋತ್ಸವ