ದಾವಣಗೆರೆ: ಪ್ರತಿದಿನ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಪತಿಯೇ, ಸೀರೆಯಿಂದ ಕುತ್ತಿಗೆಗೆ ಬಿಗಿದು ಪತ್ನಿಯನ್ನು ಉಸಿರುಗಟ್ಟಿ ಕೊಲೆಗೈದ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ: ಮಾಸಾಶನ ಪಡೆಯುತ್ತಿರುವ ಕಲಾವಿದರು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ
ಹರಳಹಳ್ಳಿ ಗ್ರಾಮದ ನೇತ್ರಾವತಿ (26) ಪತಿಯಿಂದ ಕೊಲೆಯಾದ ಮಹಿಳೆ. ಕಳೆದ ಏಳು ವರ್ಷದ ಹಿಂದೆ ಹರಳಹಳ್ಳಿ ಗ್ರಾಮದ ದೇವೇಂದ್ರಪ್ಪ ಜೊತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಮಯದಲ್ಲಿ 10 100 ಬಂಗಾರ, 1ಲಕ್ಷ ನಗದು ಕೊಡಿಸಲಾಗಿತ್ತು. ಆದರೂ ದೇವೇಂದ್ರಪ್ಪ ಮನೆಯವರು ಜೊತೆ ಸೇರಿ ನೇತ್ರಾವತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದನು. ಹಣಕ್ಕಾಗಿ ಪೀಡಿಸಿ, ಹಲ್ಲೆ ನಡೆಸುತ್ತಿದ್ದರು ಎಂದು ಮಹಿಳೆ ಪೋಷಕರು ಆರೋಪಿಸಿದ್ದಾರೆ.
ದಾವಣಗೆರೆ: ವಿದ್ಯಾನಗರ ಮನೆವೊಂದರ ಕಳ್ಳತನ ಆರೋಪಿ ಪತ್ತೆ; 3.15 ಲಕ್ಷ ಮೌಲ್ಯದ ಸ್ವತ್ತು ವಶ
ಹಿರಿಯರು ರಾಜೀಸಂಧಾನ ಮಾಡುತ್ತಿದ್ದರು. ವರದಕ್ಷಿಣೆಗಾಗಿಯೇ ನಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ನೇತ್ರಾವತಿ ಕುಟುಂಬದವರು ಆರೋಪಿಸಿದ್ದಾರೆ. ಈ ಬಗ್ಗೆ ದೇವೇಂದ್ರಪ್ಪ ಮತ್ತು ಕುಟುಂಬದ ವಿರುದ್ಧ ಮಲೇಬೆನ್ನೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದಾವಣಗೆರೆ: ವೇಶ್ಯಾವಾಟಿಕೆ ಜಾಲ ಪತ್ತೆ; ಮೂವರು ಬಂಧನ-ಇಬ್ಬರು ಮಹಿಳೆಯರ ರಕ್ಷಣೆ
ನೇತ್ರಾವತಿಗೆ ಒಂದು ಗಂಡು, ಒಂದು ಹೆಣ್ಣು ಮಗುವಿದ್ದು, ತಮ್ಮ ಮಗಳ ಸಾವಿಗೆ ಕಾರಣವಾಗಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಇದರ ಜೊತೆಗೆ ಮಕ್ಕಳಿಗೆ ಸೂಕ್ತ ಜೀವನಾಂಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.