ಚಿಗಟೇರಿ: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಐತಿಹಾಸಿಕ ಪ್ರಸಿದ್ಧ ಚಿಗಟೇರಿಯ ಶ್ರೀ ಶಿವ ನಾರದ ಮುನಿ ರಥೋತ್ಸವ 2023ರ ಏಪ್ರಿಲ್ 11ರ ಮಂಗಳವಾರ ಸಂಜೆ 5.30ಕ್ಕೆ ಮೂಲಾ ನಕ್ಷತ್ರದಲ್ಲಿ ವೈಭವದಿಂದ ಜರುಗಲಿದೆ.
ಪದ್ಧತಿಯಂತೆ ಬೆಳಿಗ್ಗೆ ಎಡೆ ಸಮರ್ಪಣೆ ಭಕ್ತರಿಂದ ನಡೆಯಲಿದೆ. ಮರುದಿನ ಸಂಜೆ ಓಕುಳಿ ಉತ್ಸವ ಇರಲಿದೆ ಎಂದು ಚಿಗಟೇರಿಯ ಶಿವ ನಾರದ ಮುನಿ ಸಮುದಾಯ ಭವನದಲ್ಲಿ ನಡೆದ ಶಾಂತಿ ಸಭೆಯ ಬಳಿಕ ಟ್ರಸ್ಟ್ ಅಧ್ಯಕ್ಷರಾದ ಅಣಬೇರು ರಾಜಣ್ಣ ತಿಳಿಸಿದರು.
ಸಭೆಯಲ್ಲಿ ಟ್ರಸ್ಟ್ ನ ಸರ್ವ ಸದ್ಯಸರಾದ ಶಾಮನೂರು ಬಸಣ್ಣ, ಕಲಪನಹಳ್ಳಿ ಬಸವಲಿಂಗಪ್ಪ, ಪಲ್ಲಾಗಟ್ಟಿ ನಾಗರಾಜ್, ಹೊಳ್ಳಲ್ಕೆರೆ ವೇದಮೂರ್ತಿ, ಹುಣಸೆಹಳ್ಳಿ ಜಾತಪ್ಪ, ದಾವಣಗೆರೆಯ ಜಿ.ಬಿ. ಸುರೇಶ್ ಕುಮಾರ್ ಹಾಗೂ ತಹಶೀಲ್ದಾರ್, ಆಯುಕ್ತರು, ಪೊಲೀಸ್ ಸಬ್ ಇನ್ ಸ್ಪೆಕ್ಟರ್, ಪಿ.ಡಿ.ಓ, ಚಿಗಟೇರಿ ಗ್ರಾಮ ಪಂಚಾಯ್ತಿ ಸದ್ಯಸರು ಮತ್ತು ಗ್ರಾಮಸ್ತರು, ಸರ್ವ ಭಕ್ತರು ಪಾಲ್ಗೊಂಡಿದ್ದರು.



