ವಿಜಯನಗರ: ತಮ್ಮನ ರಕ್ಷಣೆಗೆ ಹೋದ ಮೂವರು ಸಹೋದರಿಯರು ಸೇರಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ ದುರ್ಘಟನೆ ಘಟನೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚನ್ನಹಳ್ಳಿ ತಾಂಡದಲ್ಲಿ ನಡೆದಿದೆ.
ಒಂದೇ ಕುಟುಂಬದ ಅಭಿ ವೀರಾ ನಾಯ್ಕ (13), ಅಶ್ವಿನಿ (14), ಕಾವೇರಿ (18) ಅಪೂರ್ವಾ (18) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ಮುಳುಗುತ್ತಿದ್ದ ತಮ್ಮ ಸಹೋದರನನ್ನು ರಕ್ಷಿಸಲು ಹೋದ ಮೂರು ಜನ ಸಹೋದರಿಯರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ನೀರಿನಲ್ಲಿ ಮುಳುಗುತ್ತಿದ್ದ ಅಭಿ ರಕ್ಷಣೆಗೆ ಹೋದ ಸೋದರಿಯರು ನೀರು ಪಾಲಾಗಿದ್ದಾರೆ. ನಾಲ್ಕು ಜನ ಮಕ್ಕಳ ಸಾವಿನಿಂದ ಕುಟುಂಬ ಭಾರೀ ಆಘಾತಕ್ಕೊಳಗಾಗಿದೆ. ಘಟನಾ ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಹರಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಷಯ ತಿಳಿಯುತ್ತಿದ್ದಂತೆ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.