Connect with us

Dvgsuddi Kannada | online news portal | Kannada news online

ಹರಿಹರ: ವೀರಶೈವ ಲಿಂಗಾಯತರು ಹಿಂದೂಗಳೇ; ರಾಮ‌ ಮಂದಿರ‌ ಉದ್ಘಾಟನೆ ದಿನ ಎಲ್ಲರೂ ಅಂದೇ ರಾಮ ನವಮಿ ಆಚರಿಸಿ…

IMG 20240115 194030

ದಾವಣಗೆರೆ

ಹರಿಹರ: ವೀರಶೈವ ಲಿಂಗಾಯತರು ಹಿಂದೂಗಳೇ; ರಾಮ‌ ಮಂದಿರ‌ ಉದ್ಘಾಟನೆ ದಿನ ಎಲ್ಲರೂ ಅಂದೇ ರಾಮ ನವಮಿ ಆಚರಿಸಿ…

ದಾವಣಗೆರೆ: ವೀರಶೈವ ಲಿಂಗಾಯತ ಎಲ್ಲಾ ಒಳಪಂಗಡಗಳು ಹಿಂದುಗಳೇ… ಇದೇ 22 ರಂದು ಅಯೋಧ್ಯಯಲ್ಲಿ ರಾಮ ಮಂದಿರ ಉದ್ಘಾಟನೆ‌ ದಿನ ಎಲ್ಲಾ ವೀರಶೈವ ಲಿಂಗಾಯತರು ಅಂದೇ ರಾಮ ನವಮಿ ಆಚರಿಸುವಂತೆ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಕರೆ ನೀಡಿದರು.

ಹರಿಹರ ತಾಲೂಕಿನ ಹನಗವಾಡಿ ಮಠದ ಹರ ಜಾತ್ರೆಯಲ್ಲಿ ಮಾತನಾಡಿದ ಅವರು,‌ನಮಗೂ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ಬಂದಿದೆ. ಎಲ್ಲಾ ವೀರಶೈವ ಲಿಂಗಾಯತರಿಗೆ ಒಂದೇ ಮೀಸಲಾತಿ‌ ಇರಬೇಕು. ನಾವು ಸಮುದಾಯವನ್ನು ಒಡೆಯುವುದಿಲ್ಲ.‌ ಕೆಲವರು 2ಎ, 3ಎ, 3ಬಿ ಮತ್ತು ಎಸ್​ಸಿ ಮೀಸಲಾತಿ ಪಡೆಯುತ್ತಿದ್ದಾರೆ. ಒಂದು ಕಣ್ಣಿಗೆ ಬೆಣ್ಣೆ ಹಾಗೂ ಮತ್ತೊಂದು ಕಣ್ಣಿಗೆ ಸುಣ್ಣ ಎನ್ನುವಂತಾಗಿದೆ ಎಂದರು.

ನಾವು ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಕೇಳುತ್ತಿದ್ದೇವೆ. ನಾವು ಸಮುದಾಯವನ್ನು ಒಡೆಯುವುದಿಲ್ಲ. 2ಎ ಮೀಸಲಾತಿಗಾಗಿ ನಾವು ಕಾನೂನು ಹೋರಾಟ ಮಾಡುತ್ತಿದ್ದೇವೆ. ಲಿಂಗಾಯತರನ್ನ ಕೇಂದ್ರದ ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಎಂದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top