ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ, ಕಾಲೇಜು ಮತ್ತು ಮಾದರಿ ಶಾಲೆ, ಕಾಲೇಜುಗಳಲ್ಲಿ ತಾತ್ಕಾಲಿಕವಾಗಿ ಅತಿಥಿ ಶಿಕ್ಷಕರು (guest teacher), ಅತಿಥಿ ಉಪನ್ಯಾಸಕರಾಗಿ (guest lecture) ಕರ್ತವ್ಯ ನಿರ್ವಹಿಸಲು ಅರ್ಜಿ ಆಹ್ವಾನಿಸಲಾಗಿದೆ.
ಯಾವ ವಿಷಯ ಹುದ್ದೆ ಖಾಲಿ..?
ಕನ್ನಡ ಉಪನ್ಯಾಸಕರ ಹುದ್ದೆ-3, ಕನ್ನಡ ಅತಿಥಿ ಶಿಕ್ಷಕರ ಹುದ್ದೆ-7, ಇಂಗ್ಲೀಷ್ ಉಪನ್ಯಾಸಕರ ಹುದ್ದೆ-4 ಇಂಗ್ಲೀಷ್ ಶಿಕ್ಷಕರ ಹುದ್ದೆ-3, ಉರ್ದು ಉಪನ್ಯಾಸಕರ ಹುದ್ದೆ-3, ಗಣಿತ ಶಿಕ್ಷಕರ ಹುದ್ದೆ-8, ಗಣಿತ ಉಪನ್ಯಾಸಕರ ಹುದ್ದೆ-4, ಸಾಮಾನ್ಯ ವಿಜ್ಞಾನ ಶಿಕ್ಷಕರು-3, ಭೌತಶಾಸ್ತ್ರ ಉಪನ್ಯಾಸಕರ ಹುದ್ದೆ-3, ಸಮಾಜ ವಿಜ್ಞಾನ ಶಿಕ್ಷಕರು-6, ರಸಾಯನಶಾಸ್ತ್ರ ಉಪನ್ಯಾಸಕರ ಹುದ್ದೆ-3, ಉರ್ದು ಶಿಕ್ಷಕರು-2, ಜೀವಶಾಸ್ತ್ರ ಉಪನ್ಯಾಸಕರ ಹುದ್ದೆ-4, ಹಿಂದಿ ಶಿಕ್ಷಕರ ಹುದ್ದೆ-4, ದೈಹಿಕ ಶಿಕ್ಷಕರು-2 ಹುದ್ದೆಗೆ ಅರ್ಜಿ ಸಲ್ಲಿಸಬಹುದು.
ಆನ್ ಲೈನ್ ಅರ್ಜಿ ಸಲ್ಲಿಕೆ
ಅಭ್ಯರ್ಥಿಗಳು ಮೇ.19 ರೊಳಗಾಗಿ ವೆಬ್ ಸೈಟ್ http://dom.karnataka.gov.in ನಲ್ಲಿ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದಾವಣಗೆರೆ ಜಿಲ್ಲಾ ಕಚೇರಿ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ.ಸಂ:08192-250022 ಸಂಪರ್ಕಿಸಲು ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.



