ದಾವಣಗೆರೆ: ನಾಳೆ (ಡಿ.30) ಗ್ರಾಮ ಪಂಚಾಯ್ತಿ ಚುನಾವಣೆ ಮತ ಎಣಿಕೆ ನಡೆಯಲಿದ್ದು, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ದಾವಣಗೆರೆ ತಾಲ್ಲೂಕಿನ ಮತ ಎಣಿಕೆ ಕೇಂದ್ರ ಸರ್ಕಾರಿ ಮೋತಿ ವೀರಪ್ಪ ಬಾಲಕರ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದರು. ಮತ ಪೆಟ್ಟಿಗೆಗಳಿರುವ ಭದ್ರಾತಾ ಕೋಣೆಗಳು ಹಾಗೂ ಮತ ಎಣಿಕೆಗೆ ನಡೆಯಲಿರುವ ಸಿದ್ದತೆಗಳ ಬಗೆಗೆ ಪರಿಶೀಲಿಸಿದರು. ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್ ಇದ್ದರು.



