ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ (Davanagere City Corporation)ವ್ಯಾಪ್ತಿಯಲ್ಲಿ ವಾಜಪೇಯಿ ನಗರ ವಸತಿ ಯೋಜನೆ ಹಾಗೂ ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುವ ಆಸಕ್ತರಿಂದ ಸಹಾಯಧನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿರುವ ಶಿಥಿಲವಾಗಿರುವ ಮನೆಗಳು ಹಾಗೂ ಖಾಲಿ ನಿವೇಶನ ಹೊಂದಿರುವವರು ಅರ್ಜಿ ಸಲ್ಲಿಸಬಹುದು. ವಾಜಪೇಯಿ ವಸತಿ ಯೋಜನೆಯಡಿ ಸಾಮಾನ್ಯದಡಿ 177 ಮನೆಗಳು ಲಭ್ಯವಿದ್ದು ಸಹಾಯಧನವಾಗಿ ರೂ.2.70 ಲಕ್ಷ ಮತ್ತು ಡಾ; ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಪಂಗಡದ 18 ಮನೆಗಳು ಲಭ್ಯವಿದ್ದು ರೂ.3.50 ಲಕ್ಷ ಸಹಾಯಧನ (subsidy) ನೀಡಲಾಗುತ್ತದೆ.
ಆಸಕ್ತರು ಗಂಡ, ಹೆಂಡತಿ ಇಬ್ಬರ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪತ್ರ, ಬ್ಯಾಂಕ್ ಪಾಸ್ ಬುಕ್, ಚಾಲ್ತಿ ಇ-ಸ್ವತ್ತು, ಇಸಿ ನಕಲು, 2 ಭಾವಚಿತ್ರ ಪ್ರತಿಯೊಂದಿಗೆ ಪಾಲಿಕೆಯಲ್ಲಿ ಅರ್ಜಿ ಸಲ್ಲಿಸಲು ಆಯುಕ್ತರು ತಿಳಿಸಿದ್ದಾರೆ.



