ದಾವಣಗೆರೆ: ನಗರದ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಮೂರು ವರ್ಷದ ಪದವಿಧರ ದಿನಾಚರಣೆ ಮತ್ತು ಅಲ್ಯೂಮಿನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮುಖ್ಯ ಅತಿಥಿಗಳಾಗಿ ದಾವಣಗೆರೆ ವಿ.ವಿ. ಮೌಲ್ಯಮಾಪನ ವಿಭಾಗ ಕುಲ ಸಚಿವರು ಡಾ.ಕೆ. ಶಿವಶಂಕರ್ ಮಾತನಾಡಿ, “ಕಲಿಯುವ ದಿನ ಬಂಗಾರದ ದಿನ” ಜ್ಞಾನ ,ಕೌಶಲ್ಯ, ಧೋರಣೆಯನ್ನು ಹೊತ್ತು ಕಲಿಕೆಯಲ್ಲಿ ಸಾಧನೆ ಮಾಡಿ ಗುರಿ ಮುಟ್ಟಬೇಕು. ವಿದ್ಯಾರ್ಥಿಗಳು ವಿನೂತನ ಶಿಕ್ಷಣದೊಂದಿಗೆ ಕ್ರಿಯಾಶೀಲರಾಗಿ ದೇಶಕ್ಕೆ ಗೌರವ ತಂದುಕೊಡುವ ಮಹಾ ಚೇತನವಾಗಿ ಬೆಳೆಯಬೇಕು. ಶಿಸ್ತು ಸಂಯಮ ಪರಿಶ್ರಮವೇ ಅವರ ಉನ್ನತ ದರ್ಜೆಗೆ ಕೊಂಡೊಯ್ಯುತ್ತದೆ. ‘ಅಬ್ದುಲ್ ಕಲಾಂ’ರಂತಹ ಮಹಾತ್ಮರ ಧೋರಣೆಗಳನ್ನು ಮೈಗೂಡಿಸಿಕೊಳ್ಳಬೇಕು ,”ವಸುದೈವ ಕುಟುಂಬಕಂ ಸರ್ವಜನಾ ಸುಖಿನೌ ಭವಂತು” ಎಂದರು.
ನಾಗಶಾಂತಿ ಕಾಲೇಜು ಪ್ರಾಚಾರ್ಯರಾದ ಡಾ. ಬಿ.ಬಿ. ನಂದ್ಯಾಳ ಮಾತನಾಡಿ, ಇಂದಿನ ಸಮಾಜ ಸುವ್ಯವಸ್ಥಿತವಾಗಿದೆ ಎಂದರೆ, ಅದಕ್ಕೆ ಮಹಿಳೆಯರೇ ಕಾರಣ. ಒಬ್ಬ ಮಹಿಳೆ ತಾಯಿ, ಹೆಂಡತಿ, ಮಗಳಾಗಿ ಸಮಾಜವನ್ನು ಸುಧಾರಣೆ ಮಾಡುತ್ತಾಳೆ. ವಿದ್ಯಾರ್ಥಿ ಮೊದಲು ಸಂಸ್ಕಾರ, ಶಿಕ್ಷಣ,ಮತ್ತು ಸಾಕ್ಷರತೆ ಈ ಅಂಶಗಳನ್ನು ಕಲಿಯಬೇಕು. ಭವಿಷ್ಯದ ಕಡೆಗೆ ಗಮನ ಕೊಡಬೇಕು ಎಂದು ನುಡಿದರು.
ಜಿ.ಎಮ್. ಸಂಸ್ಥೆಯ ಅಧ್ಯಕ್ಷರಾದ ಜಿ. ಎಂ.ಲಿಂಗರಾಜ್ ರವರು ಕಾರ್ಯಕ್ರಮವನ್ನುದ್ದೇಶಿಸಿ ಕಲಿಕೆಯ ಜೊತೆಗೆ ಶಿಸ್ತು ಸಂಯಮ ಪಾಲನೆ ಮಾಡುವ ಮೂಲಕ ದೇಶದ ಆಸ್ತಿ ನಾವಾಗಬೇಕು ಸಕಲ ಗೌರವಕ್ಕೆ ಪಾತ್ರರಾಗಬೇಕು ಎಂದರು.
ಡಾ. ರಘುನಂದನ್, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರು 2019-20 ನೇ ಸಾಲಿನಲ್ಲಿ ಬಿ.ಕಾಂ. ವಿದ್ಯಾರ್ಥಿಗಳಾದ ‘ಜಬಿವುಲ್ಲಾ ಎನ್’ 2ನೇ ರಾಂಕ್ ಮತ್ತು ‘ಸೈಯದಾ ಮುಸ್ಕಾನುನಿಸಾ’ 5 ನೇ ರಾಂಕ್ ದಾವಣಗೆರೆ ವಿ ವಿ ಕ್ಕೆ. ರಾಂಕ್ ಪಡೆದ ವಿದ್ಯಾರ್ಥಿಗಳಿಗೆ 10,000 ನಗದು ಬಹುಮಾನ ಹಾಗೂ 2018-19, 2019- 20, 2020-21 ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಬೆಳ್ಳಿ ನಾಣ್ಯ ಹಾಗೂ ಪ್ರಮಾಣ ಪತ್ರವನ್ನು ಕೊಟ್ಟು ಸನ್ಮಾನಿಸಲಾಯಿತು. ಅಪರಹ್ನ ಅಲ್ಯೂಮಿನಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು