ದಾವಣಗೆರೆ: ನಗರದ ಜಿಎಂ ಇನ್ಸ್ಟಿಟ್ಯೂಟ್ ಆಫ್ ಫಾರ್ಮಸಿಟಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಕಾಲೇಜಿನ ಅಂತಿಮ ವರ್ಷದ ಬಿ ಫಾರ್ಮಸಿ ವಿದ್ಯಾರ್ಥಿಗಳಿಗೆ ನಾಲ್ಕು ದಿನದ ಉದ್ಯೋಗ ಕೌಶಲ್ಯತೆಗಳು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜಿಎಂ ಫಾರ್ಮಸಿ ವಿಭಾಗದ ಸಭಾಂಗಣದಲ್ಲಿ ರುಬಿಕಾನ್ ಸ್ಕಿಲ್ ದೆವಲಪ್ಮೆಂಟ್ ಪುಣೆ ಸಹಯೋಗದಲ್ಲಿ ನುರಿತ ತರಬೇತುದಾರರಿಂದ ಕೈಗಾರಿಕೆಗಳ ಅವಶ್ಯಕತೆಗಳಿಗೆ ಪೂರಕವಾಗಿ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ಗಿರೀಶ್ ಬೋಳಕಟ್ಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಫಾರ್ಮಸಿ ವಿದ್ಯಾರ್ಥಿಗಳಿಗೆ ಅನೇಕ ಕಂಪನಿಗಳ ಕ್ಯಾಂಪಸ್ ಸಂದರ್ಶನವನ್ನು ಏರ್ಪಡಿಸಿದ್ದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುವ ಜವಾಬ್ದಾರಿ ಇದ್ದು, ಎಲ್ಲ ರೀತಿಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಪ್ಲೇಸ್ ಮಾಡಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥ ತೇಜಸ್ವಿ ಕಟ್ಟಿಮನಿ ಟಿ ಆರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಫಾರ್ಮ ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರಾದ ಡಾ ನಿರ್ಮಲ್, ಅಧ್ಯಾಪಕರುಗಳಾದ ಕೇಶವ ಕೆ ಎಸ್ ಮತ್ತು ರಾಕೇಶ್ ಎಸ್ ಎ, ವಿದ್ಯಾರ್ಥಿಗಳು ಮತ್ತು ಇತರ ಅಧ್ಯಾಪಕ ವರ್ಗದವರು ಪಾಲ್ಗೊಂಡಿದ್ದರು.



