ದಾವಣಗೆರೆ; ನಗರದ ಜಿಎಂಐಟಿಯಲ್ಲಿ ಮೇ. 29, 30 ರಂದು ಮಲ್ಲಿಕಾ 2023 ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಉಸ್ತುವಾರಿ ಡಾ.ಪಿ.ಎಸ್ ಬಸವರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೇ. 29 ರಂದು ಕಾಲೇಜಿನ ಸಭಾಂಗಣದಲ್ಲಿ ಸಂಜೆ 5ಗಂಟೆಯಿಂದ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶೈಲ ಎಜುಕೇಷನ್ ಟ್ರಸ್ಟ್ ನ ಖಜಾಂಚಿ ಜಿ.ಎಸ್ ಅನಿತ್ ಕುಮಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗೌರವ ಅತಿಥಿಗಳಾಗಿ ಆಗಮಿಸುತ್ತಿರುವ ಹಾಸ್ಯ ನಟರಾದ ಸಂತೋಷ್, ಕುಂದಾಪುರ ಸೂರ್ಯ,ಮಾನಸ, ವಾಣಿ ವಿದ್ಯಾರ್ಥಿಗಳನ್ನು ರಂಜಿಸಲಿದ್ದಾರೆ. ಸಂಗೀತ ನಿರ್ದೇಶಕ ವಿ.ಮನೋಹರ್ ಭಾಗವಹಿಸಲಿದ್ದಾರೆ.
ಮೇ.30 ರಂದು ಸಂಜೆ 6ಕ್ಕೆ ನಡೆಯುವ ಸಮಾರಂಭದಲ್ಲಿ ಸಂಸದ ಜಿ.ಎಂ ಸಿದ್ದೇಶ್ವರ್ ಭಾಗವಹಿಸಲಿದ್ದಾರೆ. ನಟ ಅರುಣ್ ಸಾಗರ್, ಟ್ರಸ್ಟ್ ಅಧ್ಯಕ್ಷ ಜಿ.ಎಂ ಪ್ರಸನ್ನ ಕುಮಾರ್, ಕಾರ್ಯದರ್ಶಿ ಜಿ.ಎಂ ಲಿಂಗರಾಜು ಆಗಮಿಸಲಿದ್ದಾರೆಂದರು. ಎರಡು ದಿನಗಳ ಈ ಅದ್ಧೂರಿ ಸಮಾರಂಭದಲ್ಲಿ ವಿವಿಧ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರುಗಳಿಗೆ ಬಹುಮಾನ ವಿತರಣೆ ಮತ್ತು ವಿಶ್ವವಿದ್ಯಾಲಯ ಮಟ್ಟದಲ್ಲಿ ರ್ಯಾಂಕ್ ಪಡೆದ 4 ವಿದ್ಯಾರ್ಥಿಗಳಿಗೆ ಹಾಗೂ ಚಿನ್ನದ ಪದಕ ಪಡೆದ 9 ವಿದ್ಯಾರ್ಥಿಗಳಿಗೆ ಬಹುಮಾನ ಮತ್ತು ಸನ್ಮಾನ ಹಮ್ಮಿಕೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್ ತೇಜಸ್ವಿ ಕಟ್ಟೀಮನಿ, ಪ್ರೊ.ಕೆ.ಎಸ್ ಓಂಕಾರಪ್ಪ ಉಪಸ್ಥಿತರಿದ್ದರು.



