ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿ. ಮಲ್ಲಿಕಾರ್ಜುನಪ್ಪ ಸ್ಮರಣಾರ್ಥ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಆಧಾರದ ಮೇಲೆ ಶೇ. 90ಕ್ಕೂ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ 10 ಗ್ರಾಂ. ಚಿನ್ನದ ಪದಕ ಮತ್ತು ವಿಶಿಷ್ಟ ರೀತಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕಗಳನ್ನು ವಿತರಿಸುತ್ತಾ ಬಂದಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 11 ವಿದ್ಯಾರ್ಥಿಗಳು ಶೇಕಡ 90ಕ್ಕೂ ಹೆಚ್ಚು ಅಂಕ ಗಳಿಸಿ ಬಂಗಾರದ ಪದಕಗಳನ್ನು ಪಡೆದಿದ್ದಾರೆ ಮತ್ತು 27 ವಿದ್ಯಾರ್ಥಿಗಳು ವಿಶಿಷ್ಟ ರೀತಿಯಲ್ಲಿ ಸಾಧನೆಗೈದು 27 ಬೆಳ್ಳಿಯ ಪದಕಗಳನ್ನು ಪಡೆದಿದ್ದಾರೆ.
ಪ್ರತಿವರ್ಷ ನಡೆಯುವ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ವಾರ್ಷಿಕೋತ್ಸವದಲ್ಲಿ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ವಿತರಿಸುತ್ತ ಬಂದಿದ್ದು, ಈ ವರ್ಷವೂ ಸಹ ಕಾಲೇಜಿನ ವಾರ್ಷಿಕೋತ್ಸವ ಮಲ್ಲಿಕಾ 22 ಸಮಾರೋಪ ಸಮಾರಂಭದಲ್ಲಿ ದಾವಣಗೆರೆ ಜಿಲ್ಲೆಯ ಮಾನ್ಯ ಲೋಕಸಭಾ ಸದಸ್ಯರಾದ ಡಾ ಜಿಎಂ ಸಿದ್ದೇಶ್ವರ ಪದಕಗಳಿಗೆ ಭಾಜನರಾದ 11 ವಿದ್ಯಾರ್ಥಿಗಳಿಗೆ ತಲ10 ಗ್ರಾಂ ಚಿನ್ನ ಮತ್ತು 27 ವಿದ್ಯಾರ್ಥಿಗಳಿಗೆ ಬೆಳ್ಳಿಯ ಪದಕಗಳನ್ನು ವಿತರಿಸಿ ಸನ್ಮಾನಿಸಿದರು.
ವಿದ್ಯಾರ್ಥಿಗಳ ಜೊತೆಗೆ ಅವರ ಪೋಷಕರು ಸಹ ವೇದಿಕೆ ಮೇಲೆ ಉಪಸ್ಥಿತರಿದ್ದು ತಮ್ಮ ಮಕ್ಕಳ ಈ ಸಾಧನೆಯ ಬಗ್ಗೆ ಹೆಮ್ಮೆ ಮತ್ತು ಗೌರವಕ್ಕೆ ಸಾಕ್ಷಿಯಾದರು.
ಡಾ ಜಿಎಂ ಸಿದ್ದೇಶ್ವರ ಮಾತನಾಡಿ, ಸಂಸ್ಥೆಯಲ್ಲಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಶೇಕಡ 90ಕ್ಕೂ ಹೆಚ್ಚು ಅಂಕವನ್ನು ಪಡೆದು ಚಿನ್ನದ ಪದಕವನ್ನು ಪಡೆಯುವಂತಾಗಲಿ ಎಂದು ಹಾರೈಸಿದರು.
ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳಾದ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ವಿಭಾಗದಿಂದ ಕುಮಾರಿ ತೇಜಸ್ವಿನಿ ಎಂ, ಕುಮಾರಿ ಸುಪ್ರಿಯಾ ಆರ್, ರಘುವೀರ್ ಪಿ ಮೆಹರವಾಡೆ, ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದಿಂದ ಕುಮಾರಿ ದಿವ್ಯ ರಮೇಶ್ ಭಟ್, ವರುಣ್ ಎಸ್ ಪಾಟೀಲ್, ಕುಮಾರಿ ಸುಷ್ಮಾ ಬಿಸಿ, ನವ ಪ್ರೀತಮ್, ಕುಮಾರಿ ನಿರ್ಮಲಾ ಅನಂತ್ ಹೆಗಡೆ, ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದಿಂದ ಕುಮಾರಿ ಮೋನಿಷಾ ಜಿ ( ಎರಡು ಚಿನ್ನದ ಪದಕ ಗಳು), ಇನ್ಫಾರ್ಮಶನ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ವಿಭಾಗದಿಂದ ಕುಮಾರಿ ಚೈತ್ರ ಆರ್, ಸಿವಿಲ್ ಇಂಜಿನಿಯರಿಂಗ್ ವಿಭಾಗದಿಂದ ಕುಮಾರಿ ಪೂಜಾ ಎಸ್ ಸೋಮನಹಳ್ಳಿ. ಇವರುಗಳು ಪದಕವನ್ನು ಸ್ವೀಕರಿಸಿ ಸಂಸ್ಥೆಗೆ ಮತ್ತು ಪ್ರಾಧ್ಯಾಪಕರು ಗಳಿಗೆ ಅಭಿನಂದನೆಗಳನ್ನು ತಿಳಿಸಿದರು.