ದಾವಣಗೆರೆ: ದಾವಣಗೆರೆ ನಗರದ ಗಾಜಿನ ಮನೆ ಉದ್ಯಾನವನದಲ್ಲಿ ನೂತನವಾಗಿ ನಿರ್ಮಿಸಲಾಗಿರುವ Theme based Laser Show ಮತ್ತು ಬಣ್ಣದ ಬೆಳಕಿನ ನೀರಿನ ಕಾರಂಜಿಯ ಪ್ರದರ್ಶನವನ್ನು ವಾರಾಂತ್ಯದ ದಿನಗಳಾದ ಶನಿವಾರ, ಭಾನುವಾರ, ಸಾರ್ವತ್ರಿಕ ರಜೆ ಮತ್ತು ವಿಶೇಷ ದಿನಗಳಂದು ಸಾರ್ವಜನಿಕರ ಭೇಟಿಗೆ ಅವಕಾಶ ನೀಡಿ ಟಿಕೆಟ್ ದರ ಮತ್ತು ಗಾಜಿನಮನೆಯ ಭೇಟಿಗೆ ಸಮಯ ನಿಗಧಿಪಡಿಸಲಾಗಿದೆ.
ಶನಿವಾರ, ಭಾನುವಾರ, ಸಾರ್ವತ್ರಿಕ ರಜೆ ದಿನಗಳು ಮತ್ತು ವಿಶೇಷ ದಿನಗಳಂದು ಸಂಜೆ 6.30 ರಿಂದ ರಾತ್ರಿ 8.30 ರವರೆಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಕಾರಂಜಿ ವೀಕ್ಷಣೆಗೆ ವಯಸ್ಕರಿಗೆ (ಒಬ್ಬರಿಗೆ) ರೂ.30 ಮತ್ತು ಮಕ್ಕಳಿಗೆ ರೂ.10 ದರ ನಿಗದಿಪಡಿಸಲಾಗಿದೆ. ಸಾರ್ವಜನಿಕರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಗಾಜಿನ ಮನೆಗೆ ಆಗಮಿಸಿ ಬಣ್ಣದ ಬೆಳಕಿನ ಕಾರಂಜಿಯ ಪ್ರದರ್ಶನವನ್ನು ವೀಕ್ಷಿಸಬಹುದಾಗಿದೆ ಎಂದು ಉಪನಿರ್ದೇಶಕರು ತೋಟಗಾರಿಕೆ ಇಲಾಖೆ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



