ದಾವಣಗೆರೆ : ಉಸಿರಾಟ ತೊಂದರೆ ಬಳಲುತ್ತಿದ್ದ 17 ವರ್ಷದ ಯುವತಿಗೆ ಬೆಡ್ ಸಿಗದೇ ಸಾವನ್ನಪ್ಪಿದ್ದಾರೆ. ಭರತ್ ಕಾಲೋನಿ ನಿವಾಸಿ ಸಂಗೀತಾ ಸಾವನ್ನಪ್ಪಿದ ಯುವತಿಯಾಗಿದ್ದು, ಸೂಕ್ತ ಚಿಕಿತ್ಸೆ ನೀಡದ ಜಿಲ್ಲಾಸ್ಪತ್ರೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ಧಾರೆ.
ಉಸಿರಾಟದ ತೊಂದರೆ,ಯಿಂದ ಬಳಲುತ್ತಿದ್ದ ಯುವತಿ ನಿನ್ನೆಯಿಂದ ಬೆಡ್ ಗಾಗಿ ನಗರದ ಎಲ್ಲ ಆಸ್ಪತ್ರೆ ಸುತ್ತಿದರು ಬೆಡ್ ಸಿಕ್ಕಿರಲಿಲ್ಲ. ಯುವತಿಯನ್ನು ಇಂದು ಮಧ್ಯಾಹ್ನ 2 ಗಂಟೆಗೆ ಜಿಲ್ಲಾಸ್ಪತ್ರೆಗೆ ಕರೆ ತರಲಾಗಿತ್ತು. ಸರಿಯಾದ ಸಮಯಕ್ಕೆ ಸಿಗದೆ ಪ್ರಾಣ ಕಳೆದುಕೊಂಡಿದ್ಧಾಳೆ ಎಂದು ಜಿಲ್ಲಾಡಳಿತ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದರು.



