ದಾವಣಗೆರೆ: ಉಪ್ಪಾರ ಅಭಿವೃದ್ಧಿ ನಿಗಮವು 2021-22ನೇ ಸಾಲಿನಲ್ಲಿ ನಿಗಮದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಆಯವ್ಯಯದಲ್ಲಿ ಒದಗಿಸಿದ ಅನುದಾನದಿಂದ ಹಿಂದುಳಿದ ವರ್ಗಗಳ ಜನರಿಗೆ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಒದಗಿಸಲು ಕ್ರಿಯಾ ಯೋಜನೆ ರೂಪಿಸಲಾಗಿರುತ್ತದೆ. ಪ್ರಸ್ತುತ ಸಾಲಿನಲ್ಲಿ ರಾಜ್ಯ ಸರ್ಕಾರ ಒದಗಿಸಿದ ಅನುದಾನದಿಂದ ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವ ಉಪ್ಪಾರ ಸಮುದಾಯಕ್ಕೆ ಸೇರಿದ ಹಿಂದುಳಿದ ವರ್ಗಗಳ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಿಂದುಳಿದ ವರ್ಗಗಳ ಅರ್ಜಿದಾರರುಗಳು ಉಚಿತ ಅರ್ಜಿಗಳನ್ನು ನಿಗಮದ ಜಿಲ್ಲಾ ಕಛೇರಿಯಿಂದ ಪಡೆದು ಮಾರ್ಚ್ 10 ರೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ನಿಗದಿತ ದಿನಾಂಕದ ನಂತರ ಬರುವ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ.
ಯೋಜನೆಯ ಸೌಲಭ್ಯ ಪಡೆಯಲು ಯೋಜನೆಗೆ ನಿಗದಿ ಪಡಿಸಿದ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿದಾರರು 18 ವರ್ಷ ಮೇಲ್ಪಟ್ಟು ಹಾಗೂ 55 ವರ್ಷದೊಳಗೆ ವಯೋಮಿತಿ ಹೊಂದಿರಬೇಕು. ಪಾಸ್‍ಪೋರ್ಟ್ ಅಳತೆಯ 2 ಭಾವಚಿತ್ರಗಳು ಅರ್ಜಿಯೊಂದಿಗೆ ಲಗತ್ತಿಸಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. (5 ವರ್ಷಗಳ ಅವಧಿ ಒಳಗಿರಬೇಕು, ನಕಲು ಪ್ರತಿ ಲಗತ್ತಿಸಬೇಕು). ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿರಬೇಕು.(ಕನಿಷ್ಠ 02 ಎಕರೆ ಗರಿಷ್ಟ 05 ಎಕರೆ ಜಮೀನನ್ನು ಹೊಂದಿರಬೇಕು) ಈ ಬಗ್ಗೆ ಸಂಬಂಧಿಸಿದ ತಹಶಿಲ್ದಾರ್/ಕಂದಾಯ ಅಧಿಕಾರಿಗಳಿಂದ ಪಡೆದ ದೃಢೀಕೃತ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ವಿಳಾಸ ದೃಢೀಕರಣಕ್ಕೆ ಪಡಿತರ ಚೀಟಿ/ಚುನಾವಣಾ ಗುರುತಿನ ಚೀಟಿ/ಕೆ.ಪಿ.ಟಿ.ಸಿ.ಎಲ್. ಆರ್.ಆರ್. ನಂ. ಇರುವ ಬಿಲ್ಲಿನ ಜೆರಾಕ್ಸ್ ಪ್ರತಿ/ಆಧಾರ ಕಾರ್ಡ್‍ನ ಜೆರಾಕ್ಸ್ ಪ್ರತಿ ಲಗತ್ತಿಸುವುದು. ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಪ್ರದೇಶದವರಿಗೆ 40,000 ರೂ.ಗಳ ಒಳಗಿರಬೇಕು.
ಅರ್ಜಿದಾರರು ಒಂದು ಬಾರಿ ನಿಗಮದ ಯಾವುದಾದರೂ ಯೋಜನೆಯಲ್ಲಿ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಅರ್ಜಿ ನಮೂನೆಯನ್ನು ನಿಗಮದ ವೆಬ್‍ಸೈಟ್‍ನಲ್ಲಿ ಹಾಗೂ ಉಚಿತವಾಗಿ ನಿಗಮದ ಜಿಲ್ಲಾ ಕಛೇರಿಯಲ್ಲಿ ಪಡೆಯಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಿಗಮದ ಜಿಲ್ಲಾ ವ್ಯವಸ್ಥಾಪಕರ ಕಛೇರಿ ಕುರುಬರ ಹಾಸ್ಟೆಲ್ ಕಟ್ಟಡ, ಹದಡಿ ರಸ್ತೆ, ಜಯದೇವ ಸರ್ಕಲ್ ಹತ್ತಿರ, ದಾವಣಗೆರೆ 577002 ಹಾಗೂ ನಿಗಮದ ವೆಬ್‍ಸೈಟ್ www.uppardevelopment.karnataka.gov.in ಇಲ್ಲಿ ಅಥವಾ ಕಛೇರಿ ದೂರವಾಣಿ ಸಂಖ್ಯೆ 08192 230934 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಉಪ್ಪಾರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.