Connect with us

Dvgsuddi Kannada | online news portal | Kannada news online

ದಾವಣಗೆರೆ: ಗೌರಿ ಗಣೇಶ, ಈದ್ ಮಿಲಾದ್ ಹಬ್ಬಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್; ಈ ನಿಯಮ ಪಾಲಿಸಲು ಕಟ್ಟುನಿಟ್ಟಿನ ಸೂಚನೆ

davangere police 2

ದಾವಣಗೆರೆ

ದಾವಣಗೆರೆ: ಗೌರಿ ಗಣೇಶ, ಈದ್ ಮಿಲಾದ್ ಹಬ್ಬಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್; ಈ ನಿಯಮ ಪಾಲಿಸಲು ಕಟ್ಟುನಿಟ್ಟಿನ ಸೂಚನೆ

ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ಗೌರಿ ಗಣೇಶ, ಈದ್ ಮಿಲಾದ್ ಹಬ್ಬಕ್ಕೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಇಲಾಖೆ ರೂಪಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿದೆ.

ಜಿಲ್ಲೆಯಲ್ಲಿ ಪ್ರತಿ ವರ್ಷದಂತೆ ಆ. 27ರಂದು ಗೌರಿ ಗಣೇಶ ಹಾಗೂ ಸೆ. 05 ರಂದು ಈದ್ ಮಿಲಾದ್ ಹಬ್ಬಗಳನ್ನು ಶಾಂತಿಯುತವಾಗಿ ಹಾಗೂ ಸೌಹಾರ್ಧಯುತವಾಗಿ ಆಚರಿಸಲು ಈ ಮೂಲಕ ಕೋರಲಾಗಿದೆ. ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಗಣೇಶ & ಈದ್ ಮಿಲಾದ್ ಹಬ್ಬದ ಕಾನೂನು -ಸುವ್ಯಸ್ಥೆ ಕಾಪಾಡುವ ದೃಷ್ಠಿಯಿಂದ ಗಣೇಶ ಮತ್ತು ಈದ್ ಮಿಲಾದ್ ಸಮಿತಿಗಳು ಈ ಕೆಳಕಂಡ ಅಂಶಗಳನ್ನು ಪಾಲಿಸಲು ಕೋರಿದೆ

  • ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ವಿವಿಧ ಇಲಾಖೆಗಳ ಅನುಮತಿ ಪಡೆಯಲು ಸಾರ್ವಜನಿಕರಿಗೆ ಅನುಕೂಲವಾಗಲೇಂದು ದಾವಣಗೆರೆ ನಗರ ಮತ್ತು ಪ್ರತಿ ತಾಲೂಕುಗಳ, ಪುರಸಭೆ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪೊಲೀಸ್ ವೃತ್ತ ಕಛೇರಿ/ಪೊಲೀಸ್ ಠಾಣೆಗಳಲ್ಲಿ single window system ವ್ಯವಸ್ಥೆ
    ಮಾಡಲಾಗಿರುತ್ತದೆ.
  • ಗಣೇಶ ಮೂರ್ತಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪನೆ ಮಾಡಲು ಹಾಗೂ ಗಣೇಶ ವಿಸರ್ಜನೆ ಮಾಡುವಾಗ ಯಾವ ರಸ್ತೆ – ಮಾರ್ಗಗಳಲ್ಲಿ ಮೇರವಣಿಗೆ ಮಾಡುವ ಬಗ್ಗೆ ಮೊದಲೇ ಸಂಬಂಧಪಟ್ಟ ಸ್ಥಳೀಯ
    ಪೊಲೀಸ್ ಠಾಣೆಗೆ ತಿಳಿಸಿ ಅನುಮತಿ ಪಡೆಯುವುದು
  • ಗಣೇಶ ಮೂರ್ತಿ ವಿಸರ್ಜನೆಗೆ ಈಗಾಗಲೇ ನಿಗಧಿಪಡಿಸಿದ ಸ್ಥಳದಲ್ಲಿಯೇ ಗಣೇಶ ವಿಸರ್ಜನೆ ಮಾಡುವುದು
  • ಗಣೇಶ ವಿಸರ್ಜನಾ ಸಮಯದಲ್ಲಿ ಯಾವುದೇ ಜೀವ ಹಾನಿಯಾಗದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಹಾಗೂ ಈಜು ಬರುವಂತಹವರನ್ನು ಹಾಗೂ ಜೀವರಕ್ಷಕರನ್ನು ನೇಮಿಸಿಕೊಳ್ಳುವುದು.
  • ಹಬ್ಬದ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ದಕ್ಕೆ ತರುವಂತಹವರ ಮತ್ತು ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ನಿರ್ಧಕ್ಷಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು
  • ಸಾಮಾಜಿಕ ಜಾಲತಾಣಗಳಲ್ಲಿ ಕೋಮುಪ್ರಚೋದಕ ಹಾಗೂ ಧಾರ್ಮಿಕ ನಿಂದನೆ, ಸುಳ್ಳುಸುದ್ದಿ ಹರಡುವುದು,
    ಕಾನೂನು ಸುವ್ಯವಸ್ಥೆಗೆ ದಕ್ಕೆ ಬರುವಂತಹ ಪೋಸ್ಟ್ಗಳನ್ನು ಹಾಕುವುದಾಗಲೀ ಹಾಗು ಶೇರ್
    ಮಾಡುವುದಾಗಲೀ ಕಂಡು ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಾಲಾಗುವುದು
  • ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸಂಬಂಧ ಜಿಲ್ಲಾ ಮಟ್ಟದಲ್ಲಿ, ಉಪ ವಿಭಾಗ ಮಟ್ಟದಲ್ಲಿ, ಠಾಣಾ ಮಟ್ಟದಲ್ಲಿ ವಿವಿಧ ಕೋಮಿನ ಮುಖಂಡರುಗಳೊದಿಗೆ ಸಭೆ ನಡೆಸಿ ಕಾನೂನು & ಸುವ್ಯವಸ್ಥೆ ದಕ್ಕೆ ಬಾರದಂತೆ
    ಹಬ್ಬಗಳನ್ನು ಆಚರಿಸುವಂತೆ ಈಗಾಗಲೇ ತಿಳಿಸಲಾಗಿರುತ್ತದೆ
  • ಗಣೇಶ ಮೆರವಣಿಗೆ ಸಮಯದಲ್ಲಿ ಪ್ರಚೋಧನಕಾರಿ ಹಾಡುಗಳನ್ನು ಹಾಕುವುದು, ಪೋಸ್ಟರ್‌ಗಳನ್ನು ಪ್ರದರ್ಶಿಸುವುದಕ್ಕೆ ಅವಕಾಶ ಇರುವುದಿಲ್ಲ
  • ಸಾರ್ವಜನಿಕ/ಜನ ಸಂದಣಿ ಪ್ರದೇಶಗಳಲ್ಲಿ ಪಟಾಕಿಗಳನ್ನು ಸಿಡಿಸಬಾರದು. ಗಣೇಶ ಪ್ರತಿಷ್ಠಾಪನೆ ಸಂಧರ್ಭದಲ್ಲಿ ಹಾಗೂ ವಿಸರ್ಜನಾ ಮೆರವಣಿಗೆ ಸಂಧರ್ಭದಲ್ಲಿ ಮಾದಕ ವಸ್ತು ಸೇವನೆೆ, ಮದ್ಯ ಸೇವನೆ ಮಾಡಬಾರದು ಈ ಬಗ್ಗೆ ಗಣೇಶ ಮಂಡಳಿಯವರು ಜವಾಬ್ದಾರಿ ತೆಗೆದುಕೊಳ್ಳುವುದು
  • ಸಾರ್ವಜನಿಕ ಸಂಚಾರ ವ್ಯವಸ್ಥೆಗೆ ತೊಂದರೆಯಾಗದಂತೆ ಗಣೇಶ ಪ್ರತಿಷ್ಠಾಪನೆ ಮಾಡಬಾರದು ಹಾಗೂ ಇದೇ
    ರೀತಿ ವಿಸರ್ಜನೆ ಮೆರವಣಿಗೆಯನ್ನು ಸಹ ನಡೆಸಬಾರದು
  • ಗಣೇಶ ಪ್ರತಿಷ್ಠಾಪನೆ ಸ್ಥಳಗಳಲ್ಲಿ ಅಗತ್ಯ ಬೆಳಕಿನ ವ್ಯವಸ್ಥೆ ಮಾಡಿಕೊಳ್ಳುವುದು ಹಾಗೂ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳುವುದು ಹಾಗು ಯಾವುದೇ ವಿದ್ಯುತ್ ಅವಘಡಗಳಾಗಂದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು
  • ಗಣೇಶ ಮೂರ್ತಿ ವಿಸರ್ಜನೆ/ ಈದ್ ಮಿಲಾದ್ ಮೆರವಣಿಗೆಯ ದಿನಾಂಕ, ಸಮಯ ಮಾರ್ಗದ ವಿವರವನ್ನು ಅನುಮತಿಯನ್ನು ಪಡೆಯುವ ಸಮಯದಲ್ಲಿ ತಿಳಿಸತಕ್ಕದ್ದು ಅದರಂತೆ ಮೂರ್ತಿ ವಿಸರ್ಜನೆ ಮೆರವಣಿಗೆಯ ದಿನಾಂಕ ಮತ್ತು ಮಾರ್ಗ ಬದಲಾಗದಂತೆ ಖಾತ್ರಿಗೊಳಿಸುವದರೊಂದಿಗೆ ನಿಗದಿ ಪಡಿಸಿದ ಸ್ಥಳದಲ್ಲೇ ರಾತ್ರಿ 9ಗಂಟೆ ಒಳಗಾಗಿ ವಿಸರ್ಜನೆ ಮಾಡತಕ್ಕದ್ದು ಹಾಗೂ ಮೆರವಣಿಗೆಯನ್ನು ಮುಕ್ತಾಯಗೊಳಿಸತಕ್ಕದ್ದು
  • ಗಣೇಶ ಹಬ್ಬದ ಸಂಬಂಧ ಶುಚಿತ್ವ ಕಾಪಾಡಿಕೊಂಡು ಪ್ರಸಾದ ವ್ಯವಸ್ಥೆಗಳನ್ನು ಮಾಡಿಕೊಳ್ಮ್ಳವುದು & ಪ್ರತಿಷ್ಠಾಪನೆ ಸ್ಥಳಗಳಲ್ಲಿ ಬೆಂಕಿ ಅನಾಹುತಗಳಾಗಂದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವುದು
  • ಸೂಕ್ಷ್ಮ ಪ್ರದೇಶಗಳಲ್ಲಿ ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು. ಮಂಡಳಿಯ ಸದಸ್ಯರ ವ್ಯವಸ್ಥಾಪಕರ ಸಂಪೂರ್ಣ ಮಾಹಿತಿಯನ್ನು ಪೊಲೀಸ್ ಠಾಣೆಯಲ್ಲಿ ನೀಡತಕ್ಕದ್ದು. ಅದರೊಂದಿಗೆ ಪೊಲೀಸ್
    ಸಿಬ್ಬಂದಿಯೊಂದಿಗೆ ಸಹಕರಿಸ ತಕ್ಕದ್ದು
  • ಗಣೇಶ ಮತು ಈದ್ ಮಿಲಾದ್ ಹಬ್ಬದ ಸಂಬಂಧ ಈಗಾಗಲೇ ರೌಡಿ ಮತ್ತು ಮತೀಯ ಗೂಂಡಗಳ ಮೇಲೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ನಿಗಾ ಇರಿಸಲಾಗಿರುತ್ತದೆ.
  • ಗಣೇಶ ಪ್ರತಿಷ್ಠಾಪನ ಪೆಂಡಾಲ್‌ಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸಬೇಕು. ಪ್ರತಿ ಗಣೇಶ ಪ್ರತಿಷ್ಠಾಪನ ಸ್ಥಳಗಳಲ್ಲಿ ಕಾವಲುಗಾರರನ್ನು ನೇಮಿಸಬೇಕು. ಗಣೇಶ ವಿಸರ್ಜನಾ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಸ್ವಯಂ
    ಸೇವಕರುಗಳನ್ನು ನಿಯೋಜಿಸಿಕೊಳ್ಳಬೇಕು
  • ಕರ್ಕಶವಾದ ಶಬ್ಧವನ್ನುಂಟು ಮಾಡುವ ಸೌಂಡ್ ಸಿಸ್ಟಂ ಮತ್ತು ಡಿಜೆಗಳನ್ನು ಉಪಯೋಗಿಸಬಾರದು, ಏಕೆಂದರೆ
    ಮಾನ್ಯ ಘನ ನ್ಯಾಯಲಯದ ಸೂಚನೆಯಂತೆ ನಿಗದಿತ ಡಿಸಿಬಲ್ ಅನ್ನು ಪಾಲಿಸಬೇಕು ಉಲ್ಲಂಘಿಸಿದ್ದಲ್ಲಿ
    ಕಾನೂನು ರಿತ್ಯಾ ಕ್ರಮ ಕೈಗೊಳ್ಳಲಾಗುವುದು.
  • ಪಿಒಪಿ ಗಣಪತಿಗಳನ್ನು ಮತ್ತು ರಾಸಾಯನಿಕ ಬಣ್ಣಗಳಿಂದ ಮಾಡಿದ ಗಣೇಶ ಮೂರ್ತಿಗಳನ್ನು ಉಪಯೋಗಿಸಬಾರದು, ಏಕೆಂದರೆ ಇದರ ಬಳಕೆಯಿಂದ ಪರಿಸರ ಕಲುಷಿತಗೊಳಿಸುತ್ತವೆ. ಎಲ್ಲಾ ನಾಗರೀಕರು
    ಪರಿಸರ ಸ್ನೇಹಿ ಗಣಪತಿಗಳನ್ನು ಉಪಯೋಗಿಸಲು ಕೋರಿದೆ
  • ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಮಯದಲ್ಲಿ ಯಾವುದೇ ಸರ್ಕಾರಿ ಕಟ್ಟಡಗಳು ಸೇರಿದಂತೆ
    ಸಾರ್ವಜನಿಕ ಆಸ್ತಿ ಪಾಸ್ತಿಗಳ ಮೇಲೆ ಪ್ಲೆಕ್ಸ್, ಬಟಿಂಗ್ಸ್, ಬ್ಯಾನರ್ ಗಳನ್ನು ಕಟ್ಟಬಾರದು. ಸೂಕ್ಷ್ಮ ಪ್ರದೇಶಗಳಲ್ಲಿ
    ಪ್ರಚೋದಾನತ್ಮಕ ಘೊಷಣೆಗಳನ್ನು, ಗುಂಪು ಗುಂಪಾಗಿ ವಾಹನಗಳಲ್ಲಿ ಸಂಚರಿಸುವುದು, ಕೂಗಾಟ, ಅಸಭ್ಯ
    ವರ್ತನೆಗಳನ್ನು ಮಾಡಬಾರದು
  • ಗಣೇಶ ವಿಸರ್ಜನೆ ಮಾಡುವಾಗ ಸಾರ್ವಜನಿಕ ಆಸ್ತಿ, ಜೀವ ಹಾನಿಯಾಗದಂತೆ ಮುಂಜಾಗೃತ ಕ್ರಮಗಳನ್ನು ಅನುಸರಿಸಬೇಕು
  • ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡುವ ಗಣೇಶ ಹಾಗೂ ಕಾರ್ಯಕ್ರಮದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ
    ಸ್ವಯಂ ಸೇವಕರನ್ನು ನೇಮಿಸುವುದು ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುವುದು
  • ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಶಾಂತಿಯುತವಾಗಿ ಹಾಗೂ
    ಸೌಹಾರ್ಧಯುತವಾಗಿ ಹಬ್ಬವನ್ನು ಆಚರಿಸುವುದು, ಯಾವುದೇ ಅಹಿತಕರ ಘಟನೆಗಳು ಕಂಡುಬAದರೆ ತುರ್ತು ಸಹಾಯವಣಿ 112 ಗೆ ಕರೆ ಮಾಡುವುದು ಹಾಗೂ ಸ್ಥಳೀಯ ಪೊಲೀಸ್ ಠಾಣೆ/ಪೊಲೀಸ್ ಅಧಿಕಾರಿ
    ಸಿಬ್ಬಂದಿಗಳಿಗೆ ಮಾಹಿತಿ ನೀಡಲು ಕೋರಲಾಗಿದೆ
  • ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಪಡೆಯದೇ ಯಾವುದೇ ಬ್ಯಾನರ್ & ಬಂಟಿಗ್ಸ್ಗಳನ್ನು ಹಾಕಬಾರದು ಹಾಗೂ ಪ್ಲೆಕ್ಸ್, ಬ್ಯಾನರ್ & ಬಟಿಂಗ್ಸ್ ಗಳಲ್ಲಿ ಯಾವುದೇ ಧರ್ಮದ ಬಗ್ಗೆ ಅವಹೇಳನ ಬರಹಗಳು ಹಾಗೂ
    ಚಿತ್ರಗಳನ್ನು ಹಾಕಬಾರದು
  • ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ನಿಮಿತ್ತ ಯಾರೂ ಬಲವಂತವಾಗಿ ಸಾರ್ವಜನಿಕರಿಂದ ಚಂದಾ ವಸೂಲಿ ಮಾಡುವಂತಿಲ್ಲ, ಒಂದು ವೇಳೆ ಅಂತಹ ಘಟನೆ ಕಂಡು ಬಂದರೆ ಹಾಗೂ ಸಾರ್ವಜನಿಕರಿಂದ ದೂರು ಬಂದರೆ ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗುವುದು
  • ಮಂಟಪಕ್ಕೆ ಬರುವ ಭಕ್ತಾದಿಗಳ ಭಾವನೆಗಳಿಗೆ ಹಾಗೂ ಘನತೆಗೆ ಧಕ್ಕೆ ಬಾರದಂತೆ ಎಚ್ಚರ ವಹಿಸತಕ್ಕದ್ದು ಅದರೊಂದಿಗೆ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗೆ ಬೇಕಾದ ಅಗತ್ಯ ಕ್ರಮಗಳನ್ನು ವಹಿಸತಕ್ಕದ್ದು ಯಾವುದೇ
    ಧರ್ಮದ ಅವಹೇಳನ ಮಾಡುವಂತಿಲ್ಲ
  • ಪ್ರತಿಷ್ಠಾಪನೆ ಮಾಡಿದ ಜಾಗದಲ್ಲಿ ಸಿಡಿಮದ್ದುಗಳನ್ನು ಸಂಗ್ರಹಿಸಿ ಇಡುವಂತಿಲ್ಲ ಮತ್ತು ಗಣೇಶ / ಈದ್ ಮಿಲಾದ್
    ಮೆರವಣಿಗೆ ಸಮಯದಲ್ಲಿ ಪಟಾಕಿಗಳನ್ನು ಸಿಡಿಸುವಂತಿಲ್ಲ

ಗಣೇಶ ಹಾಗೂ ಈದ್ ಮಿಲಾದ್ ಹಬ್ಬದ ಸಂಬಂಧ ಜಿಲ್ಲಾ ಪೊಲೀಸ್ ವತಿಯಿಂದ ಕೈಗೊಂಡ ಕ್ರಮಗಳು:

  1. ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲಾ ಮಟ್ಟದಲ್ಲಿ 8, ಪೊಲೀಸ್ ಉಪ ವಿಭಾಗ ಮಟ್ಟದಲ್ಲಿ 60 ಹಾಗೂ ಠಾಣಾ ಮಟ್ಟದಲ್ಲಿ 335 ಶಾಂತಿ ಸೌಹಾರ್ಧ ಸಭೆಗಳನ್ನು ನಡೆಸಿ, ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ, ಶಾಂತಿ ಸೌಹಾರ್ಧತೆಕಾಪಾಡುವ ದೃಷ್ಠಿಯಿಂದ ಸೂಕ್ತ ನಿಯಮಗಳನ್ನು ಸಹ ಸೂಚಿಸಲಾಗಿದ್ದು ಅದರಂತೆ ಹಬ್ಬಗಳನ್ನು ಆಚರಿಸುವ ಮೂಲಕ ಶಾಂತಿ & ಸೌಹಾರ್ಧತೆಯನ್ನು ಕಾಪಾಡಬೇಕು.
  2. ಜಿಲ್ಲೆಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಕಾನೂನು & ಸುವ್ಯವಸ್ಥೆ, ಶಾಂತಿ ಸೌಹಾರ್ಧತೆ ಕಾಪಾಡುವ ನಿಟ್ಟಿನಲ್ಲಿ ನೆರೆಕಾವಲು ಪಡೆ, ಪೊಲೀಸ್ ಮಿತ್ರ ಪಡೆ ಹಾಗೂ ಜಂಟಿ ಕೈಗಳು ಪಡೆಗಳ ಸ್ವಯಂ ಸೇವಕರುಗಳನ್ನು ಬಳಸಿಕೊಳ್ಳಲಾಗುತ್ತಿದೆ.
  3. ಜಿಲ್ಲೆ ಹಾಗೂ ಠಾಣಾ ಮಟ್ಟದಲ್ಲಿ ರೌಡಿ ಹಾಗೂ ಮತೀಯ ಗೂಂಡಾಗಳ ಪೇರೆಡ್ ನಡೆಸಿ ಜಿಲ್ಲೆಯಲ್ಲಿ ಯಾವುದೇ ರೀತಿಯಲ್ಲಿ ಕಾನೂನು & ಸುವ್ಯವಸ್ಥೆ, ಶಾಂತಿ ಸೌಹಾರ್ಧತೆಗೆ ದಕ್ಕೆ ಬಾರದಂತೆ ನಡೆದುಕೊಳ್ಳಬೇಕು ಎಂದು ಎಚ್ಚರಿಕೆ
    ನೀಡಲಾಗಿರುತ್ತದೆ. ಹಾಗೂ ಈಗಾಗಲೇ ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ 25 ಜನ ರೌಡಿ
    & ಮತೀಯ ಗೂಂಡಾಗಳನ್ನು ಗಡಿಪಾರು ಮಾಡಲಾಗಿರುತ್ತದೆ
  4. ಜಿಲ್ಲೆಯಲ್ಲಿ ಗಣೇಶ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಅಪರಾಧಗಳನ್ನು ತಡೆಗಟ್ಟುವ, ಕಾನೂನು & ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ18,400 ಸಿಸಿಟಿವಿ ಗಳನ್ನು ಹಾಕಲಾಗಿದ್ದು ಹಾಗೂ ಡ್ರೋನ್ ಕ್ಯಾಮೇರಾಗಳ
    ಮೂಲಕ ಹದ್ದಿನ ಕಣ್ಣು ಇಡಲಾಗಿರುತ್ತದೆ
  5. ಜಿಲ್ಲೆಯ ಪ್ರಮುಖ ೩೫ ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ಒಳ ಹಾಗೂ ಹೊರ ಹೋಗುವ ವ್ಯಕ್ತಿ ಹಾಗೂ ವಾಹನಗಳ ಮೇಲೆ ನಿಗಾವಹಿಸಲಾಗಿರುತ್ತದೆ
  6. ದಾವಣಗೆರೆ ನಗರ ಹಾಗೂ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಪಥಸಂಚಲನ ನಡೆಸಿದ್ದು, ಸಾರ್ವಜನಿಕರಲ್ಲಿ ಭಯಮುಕ್ತ, ಶಾಂತಿ ಸೌಹಾರ್ಧಯುತವಾಗಿ ಹಬ್ಬಗಳನ್ನು ಆಚರಿಸಲು ಜಿಲ್ಲಾ ಪೊಲೀಸ್ ವಿಶ್ವಾಸ ಮೂಡಿಸಿರುತ್ತದೆ
  7. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣಾ ಮಟ್ಟದಲ್ಲಿರುವ ಪ್ಲೆಕ್ಸ್, ಬಟಿಂಗ್ಸ್, ಬ್ಯಾನರ್ ಪ್ರಿಂಟಿಂಗ್ ಅಂಗಡಿಗಳೊಂದಿಗೆ
    ಸಭೆ ನಡೆಸಿ ಧಾರ್ಮಿಕ, ವ್ಯಕ್ತಿಯ ಬಗ್ಗೆ ಅವಹೇಳನವಿರುವಂತಹ ಬರಹಗಳು, ಚಿತ್ರಗಳು ಇರುವಂತಹ ಪ್ಲೆಕ್ಸ್, ಬಟಿಂಗ್ಸ್, ಬ್ಯಾನರ್ ಗಳನ್ನು ಪ್ರಿಂಟ್ ಮಾಡದಂತೆ ಹಾಗೇನಾದರೂ ಕಂಡು ಬಂದರೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿರುತ್ತದೆ

ಪೊಲೀಸ್ ಬಂದೋಬಸ್ತ್: ದಾವಣಗೆರೆ ಜಿಲ್ಲೆಯಾದ್ಯಂತ ವಿವಿಧ ಕಡೆಗಳಲ್ಲಿ ಅಂದಾಜು 2329 ಸಾರ್ವಜನಿಕ ಗಣೇಶ ಮೂರ್ತಿಗಳನ್ನುಸ್ಥಾಪಿಸುತ್ತಿರುವ ಬಗ್ಗೆ ತಿಳಿದು ಬಂದಿರುತ್ತದೆ. ಗಣೇಶ & ಈದ್ ಮಿಲಾದ್ ಹಬ್ಬದ ಸಂಬಂಧ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಜಿಲ್ಲೆಯಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ
ಮಾಡಲಾಗಿರುತ್ತದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಕೋಮು ಸೌಹಾರ್ಧತೆ ಪಾಲನೆ ಮತ್ತು ಜನಸ್ನೇಹಿ ಪೊಲೀಸ್ ಆಗಿ ಕರ್ತವ್ಯವನ್ನು ನಿರ್ವಹಿಸುತ್ತೇವೆ ಎಂದು ಪೊಲೀಸ್ ಇಲಾಖೆ ನಾಗರಿಕರಿಗೆ‌ ತಿಳಿಸಿದೆ.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top