ದಾವಣಗೆರೆ: ಗ್ಲಾಸ್ ಹೌಸ್ ಅಭಿವೃದ್ಧಿಗೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಅನುದಾನ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡಲಾಗುವುದು ಎಂದು ಶಾಸಕ ಎಸ್.ಎ. ರವೀಂದ್ರನಾಥ್ ಹೇಳಿದರು.
ಗಣರಾಜ್ಯೋತ್ಸವ ಅಂಗವಾಗಿ ನಾಲ್ಕು ದಿನಗಳ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಲಾಲ್‌ಬಾಗ್‌ನಂತೆ ಸುಂದರ ಪರಿಸರ ನಿರ್ಮಾಣ ಮಾಡುವ ಉದ್ದೇಶವಿದೆ. ಬಟಾನಿಕಲ್ ಗಾರ್ಡನ್ ಆಗಬೇಕು. ಆಕರ್ಷಕ ಹೂವುಗಳನ್ನು ಬೆಳೆಸಬೇಕಿದೆ.ಈಗಾಗಲೇ ಗ್ಲಾಸ್ ಹೌಸ್ ಅಭಿವೃದ್ಧಿಗೆ ಒಟ್ಟು 26.48 ಕೋಟಿ ಬಿಡುಗಡೆಯಾಗಿದೆ ಎಂದು ತಿಳಿಸಿದರು.