ದಾವಣಗೆರೆ: 2021-22 ನೇ ಸಾಲಿನ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಬಾಕಿ ಉಳಿದಿರುವ ಘಟಕಗಳನ್ನು ಅನುಷ್ಠಾನಗೊಳಿಸಲು ಮೇ.31 ರಂದು ಕೊನೆಯ ದಿನವಾಗಿದ್ದು, ಜಿಲ್ಲೆಯ ಎಲ್ಲಾ ವೃತ್ತಿಪರ ಮೀನುಗಾರರು ಅಥವಾ ಸಾರ್ವಜನಿಕರು ಯೋಜನೆಗಳ ಸಹಾಯಧನ ಮತ್ತು ಚಟುವಟಿಕೆಗಳ ಸದುಪಯೋಗವನ್ನು ಪಡೆಯಲು ಆಸಕ್ತ ಒಳನಾಡು ಮೀನುಗಾರರು ಸಂಬಂಧಪಟ್ಟ ತಾಲ್ಲೂಕು ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಗಳಗೆ ಸಂಪರ್ಕಿಸಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ದಾವಣಗೆರೆ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.