ದಾವಣಗೆರೆ: ಒಳನಾಡು ಮೀನುಗಾರಿಕೆ ಕಾರ್ಯನೀತಿ 2014 ರನ್ವಯ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಗಳ/ಜಲಸಂಪನ್ಮೂಲಗಳ ಮೀನುಪಾಶುವಾರು ಹಕ್ಕನ್ನು ಮೀನುಗಾರರ ಸಹಕಾರ ಸಂಘಗಗಳಿಗೆ ಗುತ್ತಿಗೆ ಮತ್ತು ಮೀನುಗಾರರಗೆ ಪರವಾನಿಗೆ ಮುಖಾಂತರ ಮೀನುಗಾರಿಕೆ ನಡೆಸಲು ಅವಕಾಶ ನೀಡಲಾಗಿದೆ.
ಕೆರೆಗಳನ್ನು ವಿಲೇ ಮಾಡಿದ ನಂತರ ಬಾಕಿ ಉಳಿದ ಜಲಸಂಪನ್ಮೂಲಗಳನ್ನು ಇ-ಟೆಂಡರ್ ಪ್ರಕ್ರಿಯೆಯ ಮೂಲಕ 2022-23 ನೇ ಫಸಲಿ ವರ್ಷದಿಂದ ವಿಲೇವಾರಿ ಮಾಡಲು ಸರ್ಕಾರವು ಆದೇಶ ಹೊರಡಿಸಿರುತ್ತದೆ.
ಆದ್ದರಿಂದ ಇನ್ನುಮುಂದೆ, ಮೀನುಗಾರಿಕೆ ಇಲಾಖೆಯ ವತಿಯಿಂದ ಹೊರಡಿಸಲಾಗುವ ಇ-ಟೆಂಡರ್ ಪ್ರಕಟಣೆಯನ್ವಯ ಕರೆಗಳ ಮೀನುಪಾಶುವಾರು ಹಕ್ಕನ್ನು ಪಡೆಯಲಿಚ್ಛಿಸುವವರು ಕರ್ನಾಟಕ ಸರ್ಕಾರ `ಇ-ಸಂಗ್ರಹಣ ಪೋರ್ಟಲ್ (e-ಠಿಡಿoಛಿumeಟಿಣ ಠಿoಡಿಣಚಿಟ)ನಲ್ಲಿ ನೋಂದಾಯಿಸಿಕೊಳ್ಳುವುದು ಮತ್ತು ಅಗತ್ಯ ಡಿ.ಎಸ್.ಸಿ. ಕೀ ಪಡೆಯುವುದು ಕಡ್ಡಾಯವಾಗಿದೆ.ಹೆಚ್ಚಿನ ಮಾಹಿತಿಗಾಗಿ https://eproc.karnataka.gov.in ಹಾಗೂ ಸಹಾಯವಾಣಿ ಕೇಂದ್ರ 8046010000, 8068948777 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



