ದಾವಣಗೆರೆ: ನಗರದ ಎವಿಕೆ ಕಾಲೇಜು ರಸ್ತೆಯ ಫಾರ್ಮಾವೊಂದಕ್ಕೆ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಫಾರ್ಮಾ ಸಂಪೂರ್ಣ ಸುಟ್ಟು ಭಸ್ಮವಾಗಿದೆ.
ತಡ ರಾತ್ರಿ ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಹಾರಿಸುತ್ತಿದ್ದ ಪಟಾಕಿ ಇದ್ದಕ್ಕಿದ್ದಂತೆ ಫಾರ್ಮಾ ಕಿಟಕಿ ಮೂಲಕ ಒಳ ಹೋಗಿ ಸಿಡಿದೆ. ತಕ್ಷಣವೇ ಇಡೀ ಫಾರ್ಮಾ ಅಗ್ನಿ ಆವರಸಿಕೊಂಡಿದೆ. ಅಪಕ್ಕ ಪಕ್ಕದ ಮನೆಯವರು ಏನಾಗಿದೆ ಎಂದು ನೋಡ ನೋಡುತ್ತಿದ್ದಂತೆ ಇಡೀ ಬಿಲ್ಡಿಂಗ್ ಅನ್ನು ಅಗ್ನಿ ಆವರಿಸಿಕೊಂಡಿದೆ. ಫಾರ್ಮಾದಲ್ಲಿದ್ದ ಔಷಧಿ ಸಾಮಾಗ್ರಿಗಳನ್ನು ಸುಟ್ಟು ಕರಕಲು ಮಾಡಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.



