ದಾವಣಗೆರೆ: ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ, ಮನೆಯಲ್ಲಿದ್ದ ಚಿನ್ನ, ಬೆಳ್ಳಿ, ಬಟ್ಟೆ, ಪೀಠೋಪಕರಣಗಳು ಬೆಂಕಿಗೆ ಆಹುತಿಯಾದ ಘಟನೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಸರ್ವರಕೇರಿಯ ಅನಿತಾ ಮೋಹನ್ ಅಂಡಿ ಎಂಬುವವರ ಮನೆಗೆ ಆಕಸ್ಮಿಕ ಬೆಂಕಿ ಬಿದ್ದುದೆ. ನಿವಾಸಿಗಳು ಮುಂಭಾಗದ ದುರಸ್ತಿ ಕಾರ್ಯದಲ್ಲಿರುವ ಮನೆಯಲ್ಲಿ ವಾಸವಿದ್ದರು. ಬೆಳಗ್ಗೆ 6 ಗಂಟೆ ವೇಳೆಯಲ್ಲಿ ಮನೆಗೆ ಬೆಂಕಿ ಬಿದ್ದಿದೆ.ಯಾವುದೇ ಪ್ರಾಣಪಾಯವಾಗಿಲ್ಲ.
ಬೆಂಕಿಗೆ ಮನೆಯಲ್ಲಿದ್ದ ಕಾಲು ಕೆಜಿ ಬೆಳ್ಳಿ,ಬಂಗಾರ ಹಾಗೂ ಮನೆಯ ದುರಸ್ತಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಸುಟ್ಟು ಹೋಗಿದೆ. ಸ್ಥಳಕ್ಕೆ ತಹಶೀಲ್ದಾರ್ ಪುರಂದರ ಹೆಗಡೆ, ಕಂದಾಯ ಅಧಿಕಾರಿ ರಮೇಶ್ ಹಾಗೂ ಪುರಸಭೆಯ ಅಧಿಕಾರಿ ಪರಮೇಶ್‍ನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



