ದಾವಣಗೆರೆ; ಜಿಲ್ಲೆಯ ಹರಿಹರ ಸಮೀಪದ ಕುಮಾರಪಟ್ಟಣಂ ಬಳಿ ಗ್ರಾಸಿಂ ಇಂಡಸ್ಟ್ರೀಸ್ ಗೆ ನಿನ್ನೆ( ಏ.30) ರಾತ್ರಿ ಸಿಡಿಲು ಬಡಿದು ಭಾರೀ ಅಗ್ನಿ ಅನಾಹುತ ಸಂಭವಿಸಿದೆ. ಸಿಡಿಲಿನ ಬೆಂಕಿಗೆ ಬಟ್ಟೆ ತಯಾರಿಕೆಯ ನೂಲು, ಯಂತ್ರೋಪಕರಣಗಳು ಸುಟ್ಟು ಭಸ್ಮವಾಗಿವೆ. ಸುಮಾರು 30 ಲಕ್ಷದಷ್ಟು ನಷ್ಟ ಸಂಭವಿಸಿದೆ ಎಂದು ಅಂದಾಜಿದಲಾಗಿದೆ.
ಭಾರೀ ಪ್ರಮಾಣದ ಬೆಂಕಿ ಮುಗಿಲೆತ್ತರಕ್ಕೆ ಹೊತ್ತಿ ಉರಿದ್ದರಿದಿದೆ. ಹರಿಹರ, ದಾವಣಗೆರೆ, ರಾಣೇಬೆನ್ನೂರು ಮತ್ತು ಹಾವೇರಿಯ ಅಗ್ನಿಶಾಮಕ ದಳದ 8, ಕಾರ್ಖಾನೆಯ 2 ವಾಹನಗಳ 30ಕ್ಕೂ ಅಧಿಕ ಸಿಬ್ಬಂದಿ ಸತತವಾಗಿ ಕಾರ್ಯಾಚರಣೆ ನಡೆಸುತ್ತಿದ್ದು, ಬೆಂಕಿ ನಂದಿಸಿದ್ದಾರೆ.



