ದಾವಣಗೆರೆ: ಭದ್ರಾ ಜಲಾಶಯದಿಂದ (bhadra dam) ಈ ಬಾರಿಯ ಬೇಸಿಗೆ ಹಂಗಾಮಿಗೆ ಫೆಬ್ರವರಿ- ಏಪ್ರಿಲ್ ವರೆಗೆ ಪ್ರತಿ ತಿಂಗಳು 20 ದಿನ ನೀರು ಹರಿಸಬೇಕು ಎಂದು ದಾವಣಗೆರೆ ರೈತ ಮುಖಂಡರು ಆಗ್ರಹಿಸಿದರು.
ನಗರದ ನೀರಾವರಿ ಇಲಾಖೆ ವಿಭಾಗ ಕಚೇರಿಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ 2023-24ನೇ ಸಾಲಿನ ಬೇಸಿಗೆ
ಹಂಗಾಮಿಗೆ ನೀರು ಹರಿಸುವ ಸಭೆಯಲ್ಲಿ ಒತ್ತಾಯಿಸಿದರು. ಜ.6ರಂದು ಭದ್ರಾ ನೀರಾವರಿ ಸಲಹಾ ಸಮಿತಿ (ICC) ಸಭೆ ಶಿವಮೊಗ್ಗದಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನೀರಾವರಿ ಇಲಾಖೆ ಆಯೋಜಿಸಿದ್ದ ರೈತರ ಸಭೆಯಲ್ಲಿ ರೈತ ಮುಖಂಡರು ಆಗ್ರಹಿಸಿದರು. ಶೇ.70ರಷ್ಟು ಅಚ್ಚುಕಟ್ಟು ಪ್ರದೇಶ ಹೊಂದಿರುವುದು ದಾವಣಗೆರೆಯಲ್ಲೇ , ಹೀಗಾಗಿ ಇನ್ಮುಂದೆ ಭದ್ರಾ ನೀರಾವರಿ ಸಲಹಾ ಸಮಿತಿ ಸಭೆ ದಾವಣಗೆರೆಯಲ್ಲಿಯೇ ನಡೆಸಬೇಕು ಎಂದು ಕಾರ್ಯಪಾಲಕ ಅಭಿಯಂತರ
ಮಂಜುನಾಥ್ ಗೆ ಒತ್ತಾಯಿಸಿದರು.
ಜಲಾಶಯದ ನೀರಿನ ಮಟ್ಟ 151.14 ಅಡಿ ಇದ್ದು, ಲಭ್ಯತೆಯ ನೀರಿನ ಪ್ರಮಾಣ 21.54ಟಿಎಂಸಿ ನೀರಿದೆ. ಈ ಪ್ರಮಾಣದ ನೀರನ್ನು 72 ದಿನಹರಿಸಬಹುದಾಗಿದ್ದು, ಫೆ.1ರಿಂದ 20 ದಿನ ನೀರು ಬಿಡಬೇಕು. 10 ದಿನ ನೀರು ನಿಲ್ಲಿಸಿ, ಮತ್ತೆ ಮಾಚ್ ನಲ್ಲಿ 20 ದಿನ ಬಿಡಬೇಕು. ಏಪ್ರಿಲ್‌ನಲ್ಲಿ ಸಹ 20 ದಿನ ನೀರು ಬಿಟ್ಟು, 10 ದಿನ ನೀರು ನಿಲ್ಲಿಸಬೇಕು.ಮೇ ತಿಂಗಳಿನಲ್ಲಿ ಉಳಿದ ನೀರು ಬಿಡಬೇಕ ಎಂದರು.
ನೀರು ಬೆಳ್ಳಿಗನೂಡು, ಹಿರೇಕೋಗಲೂರು ಸೂಪರ್ ಪ್ಯಾಸೇಜ್ ಒಡೆದಿದ್ದರಿಂದ ಅಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದು, ಅಲ್ಲಿ ದುರಸ್ತಿಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದರು. ನೀರಾವರಿ ಇಲಾಖೆ ಇಇ ಮಂಜುನಾಥ ಮಾತನಾಡಿ, ಅಚ್ಚುಕಟ್ಟು ರೈತರ ನಿರ್ಣಯ, ಬೇಡಿಕೆಗಳ ಬಗ್ಗೆ ಜ.6ರಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರಾ ಕಾಡಾ
ಸಮಿತಿ ಸಭೆಯ ಗಮನಕ್ಕೆ ತರುತ್ತೇವೆ. ಭದ್ರಾ ಕಾಡಾ ಸಭೆ ದಾವಣಗೆರೆಯಲ್ಲೇ ನಡೆಸಬೇಕು, ಫೆಬ್ರುವರಿಯಿಂದ ಏಪ್ರಿಲ್‌ವರೆಗೆ ಪ್ರತಿ ತಿಂಗಳು 20 ದಿನ ನಾಲೆಗಳಿಗೆ ನೀರು ಹರಿಸುವುದೂ ಸೇರಿಅಚ್ಚುಕಟ್ಟು ರೈತರ ಬೇಡಿಕೆ ಬಗ್ಗೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ಭದ್ರಾ ಕಾಡಾ ಸಮಿತಿ ಸಭೆಯ ಗಮನಕ್ಕೆ ತರುವ ಭರವಸೆ ನೀಡಿದರು.
ಈಗ ಜಲಾಶಯದಲ್ಲಿ ನೀರಿನ ಮಟ್ಟ 151.3 ಅಡಿ ನೀರಿದ್ದು, 35.25 ಟಿಎಂಸಿನಲ್ಲಿ ಡೆಡ್ ಸ್ಟೋರೇಜ್ ತೆಗೆದರೆ, 21.4 ಟಿಎಂಸಿ ನೀರು ಬಳಸಬಹುದು. ಕುಡಿಯುವ ನೀರು, ಕೈಗಾರಿಕೆಗೆ
6.9 ಟಿಎಂಸಿ ನೀರು ಬೇಕು. 2.5 ಟಿಎಂಸಿ ನೀರು
ಆವಿಯಾಗುತ್ತದೆ. ಉಳಿದಂತೆ ನೀರಾವರಿಗೆ 12.11 ಟಿಎಂಸಿ ನೀರಿದ್ದು, ಅದನ್ನು ಭದ್ರಾ ಎಡ ಮತ್ತು ಬಲ ದಂಡೆಗೆ ಹರಿಸಿದರೆ, 47 ದಿನಗಳ ಕಾಲ ನಾಲೆಗೆ ನೀರು ಹರಿಸಬಹುದಾಗಿದೆ ಎಂದರು.
ಇದಕ್ಕೆ ರೈತರು ಆಕ್ಷೇಪಿಸಿದರು. 72 ದಿನ ಹರಿಸಲು ನೀರಿನ ಪ್ರಮಾಣ ಲಭ್ಯತೆ ಇದೆ. 7 ಟಿಎಂಸಿ ನೀರು ಕುಡಿಯುವನೀರಿಗಾಗಿ ಕಾಯ್ದಿರಿಸುವುದು, 2.4 ಟಿಎಂಸಿ ನೀರು ಅವಿಯಾಗುತ್ತದೆ ಎಂಬುದು ಸರಿಯಲ್ಲ ಎಂದು ರೈತಮುಖಂಡ ಸತೀಶ್ ಹೇಳಿದರು.
ಭದ್ರಾ ಮೇಲ್ದಂಡೆ ಕಾಡಾ ಸಮಿತಿಗೆ ಒಳಪಟ್ಟಿಲ್ಲ. ಹೀಗೆ ದಿಢೀರನೇ ನೀರು ಬಿಟ್ಟರೆ ಅಚ್ಚುಕಟ್ಟು ರೈತರಿಗೆ ಅನ್ಯಾಯವಾಗುತ್ತದೆ. ಕಾಡಾ
ಸಮಿತಿಯೇ ನೀರಿನ ನಿರ್ಣಯ ಮಾಡಬೇಕು. ಇಲ್ಲಿ ನಿರ್ಣಯವಾಗುವ ಎಲ್ಲಾ ಬೇಡಿಕೆ ಕಾಡಾ ಸಮಿತಿಗೆ ನೀಡಬೇಕು. ದಾವಣಗೆರೆಯಲ್ಲೇ ಐಸಿಸಿ ಸಭೆ ಮಾಡಬೇಕು ಎಂದುಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಎಚ್.ಆರ್. ಲಿಂಗರಾಜ ಹೇಳಿದರು.
ಅಚ್ಚುಕಟ್ಟು ಪ್ರದೇಶದ ರೈತ ಬಳಕೆಗಾರ ಮಹಾ ಮಂಡಳ ಅಧ್ಯಕ್ಷ ದ್ಯಾವಪ್ಪರೆಡ್ಡಿ, ಮುದೇಗೌಡಪ್ಪ ಕೊಂಡಜ್ಜಿ, ಮುದೇಗೌಡ್ರ ಗರೀಶ್, ಬಾಬು ರಾವ್, ಬೆಳವನೂರು ಬಿ.ನಾಗೇಶ್ವರರಾವ್ಜಿ , ಮಂಜುನಾಥ ಪಟೇಲ್, ಜಿಗಳಿ ಆನಂದಪ್ಪ, ಕುಕ್ಕವಾಡ ಮಂಜುನಾಥ, ಧನಂಜಯ, ಬಲ್ಲೂರು ಬಸವರಾಜ ಇತರರಿದ್ದರು.