ದಾವಣಗೆರೆ: ಕೆಳಗೆ ನಿಂತು ಟ್ರ್ಯಾಕ್ಟರ್ ಸ್ಟಾರ್ಟ್ ಮಾಡಲು ಹೋದ ರೈತನ ಮೇಲೆ ಸ್ವಲ್ಪ ಮುಂದೆ ಹೋಗಿ ರಿಟರ್ನ್ ರೈತನ ಮೇಲೆ ಹರಿದು, ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೊಡ್ಡೇರಿಕಟ್ಟೆ ಗ್ರಾಮದಲ್ಲಿ ನಡೆದಿದೆ.
ನವೀನ್ ಎಚ್.ಟಿ. (41) ಮೃತಪಟ್ಟ ರೈತನಾಗಿದ್ದಾನೆ. ದೊಡ್ಡೇರಿಕಟ್ಟೆ ಗ್ರಾಮದ ರೈತ ನವೀನ್ ಅಡಿಕೆ ಸುಲಿಯುವ ಯಂತ್ರಕ್ಕೆ ಅಡಿಕೆ ಹಾಕಲು ಟ್ರಾಕ್ಟರ್ ನಿಲ್ಲಿಸಿದ್ದರು. ಸ್ವಲ್ಪ ಮುಂದೆ ಬಿಡಲು ಕೆಳಗೆ ನಿಂತುಕೊಂಡೇ ಸ್ಟಾರ್ಟ್ ಮಾಡಿದ್ದಾರೆ. ಈ ವೇಳೆ ಸ್ವಲ್ಪ ಮುಂದಕ್ಕೆ ಹೋಗಿ ರಿಟರ್ನ್ ತಿರುಗಿದ ಟ್ರ್ಯಾಕ್ಟರ್ ನವೀನ್ ಮೈಮೇಲೆ ಹರಿದಿದೆ. ನವೀನ್ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



