ದಾವಣಗೆರೆ: ಬಿಜೆಪಿಯ ಎಲ್ಲರರೂ ಬ್ಲ್ಯಾಕ್ ಮೇಲ್ ಗಿರಾಕಿಗಳು. ಒಬ್ಬರು, ಇಬ್ಬರು ಅಲ್ಲ ಎಲ್ಲರೂ ಅವರೇ ಎಂದು ಮಾಜಿ ಮುಖ್ಯಮಂತ್ರಿ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಬಿಜೆಪಿ ಮುಖಂಡ ಎಚ್ . ವಿಶ್ವನಾಥ್ ಸಿಡಿ ನಾಳೆ ಹೊರ ಬರುತ್ತೇ ಎಂದು ಹೇಳಿದ್ದಾರೆ. ಹೀಗಾಗಿ ಸಿಡಿ ಬಗ್ಗೆ ಸೂಕ್ತ ತನಿಖೆ ಆಗಬೇಕು. ತನಿಖೆ ಆದ ಮೇಲೆ ಸತ್ಯ ಗೊತ್ತಾಗಲಿದೆ ಎಂದು ತಿಳಿಸಿದರು. ಯಡಿಯೂರಪ್ಪ ಸರ್ಕಾರ ಪಾಪದ ಸರ್ಕಾರ. ನೈತಿಕತೆಯಿಂದ ಬಂದಿಲ್ಲ, ಅಕ್ರಮವಾಗಿ ಸರ್ಕಾರ ರಚನೆ ಆಗಿದೆ ಎಂದರು.
ಸಿಡಿಯಲ್ಲಿ ಕೆಟ್ಟದಾಗಿ ಇದೆ ಎಂದು ಹೇಳುತ್ತಾರೆ. ಬಿಡುಗಡೆ ಮಾಡಲಿ, ಅದರಲ್ಲಿರುವ ಸತ್ಯ ತನಿಖೆಯಿಂದ ಹೊರಬರಲಿ. ಬಿಜೆಪಿಯಲ್ಲಿ ಈಗ ಕೆಲವರು ಆರೋಪ ಮಾಡುತ್ತಿದ್ದಾರೆ. ಶಾಸಕರನ್ನ ಖರೀದಿ ಮಾಡಿ ಬಂದಿದ್ದ, ಈಗ ಒಂದೊಂದಾಗಿ ಹೊರ ಬರುತ್ತಿದೆ.
ನಾನು ಎಸ್ ಟಿ ವಿರೋಧಿಯಲ್ಲ, ಕುರುಬರಿಗೆ ಎಸ್ ಟಿ ಮೀಸಲಾತಿಗಾಗಿ ಕನಕಗುರುಪೀಠದ ಸ್ವಾಮೀಜಿ ಇಂದು ಪಾದಯಾತ್ರೆ ಆರಂಭಿಸಿದ್ದಾರೆ. ಆದ್ರೆ ನಾನು ಎಸ್ ಟಿ ವಿರೋಧಿಯಲ್ಲ ಎಂದು ತಿಳಿಸಿದರು.



