ದಾವಣಗೆರೆ; ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿ ಸಿ ಎ ಮತ್ತು ಬಿ ಕಾಂ ಪದವಿ ಕೋರ್ಸ್ ಗಳಿಗೆ ಸಂಜೆ ಕಾಲೇಜು ಪ್ರವೇಶಾತಿ ಪ್ರಾರಂಭವಾಗಿದೆ.
2022 ರಿಂದ ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಪ್ರಾರಂಭಗೊಂಡಿದ್ದು, ದಾವಣಗೆರೆ ವಿಶ್ವವಿದ್ಯಾನಿಲಯದ ಸಂಯೋಜನೆಗೆ ಒಳಪಟ್ಟಿದ್ದು ,ಇಲ್ಲಿ ವೃತ್ತಿಪರ ಬಿ ಕಾಂ ಹಾಗೂ ಬಿಸಿಎ ಪದವಿ ಕೋರ್ಸ್ಗಳು ಲಭ್ಯವಿದೆ. ಈ ಕಾಲೇಜು ಪಾರ್ಟ್ಟೈಮ್ ಜಾಬ್ ಮಾಡುತ್ತಿರುವ ಅಥವಾ ಜಾಬ್ ಮಾಡುವವರ ಕಲಿಕೆಯ ಆಸಕ್ತಿಗೆ ಪೂರಕವಾಗಿ ಪ್ರಾರಂಭಗೊಂಡಿದೆ. ಈಗಾಗಲೇ ಎರೆಡು ಬ್ಯಾಚ್ ಗಳು ಸಂಜೆ ಕಾಲೇಜಿನ ಅಭ್ಯಾಸದಲ್ಲಿ ನಿರತವಾಗಿದ್ದು, ನುರಿತ ಉಪನ್ಯಾಸಕರುಗಳು, ಸುಸಜ್ಜಿತ ಕೊಠಡಿಗಳು, ಉತ್ತಮ ಗ್ರಂಥಾಲಯ ಹಾಗೂ ಅತ್ಯುತ್ತಮ ಕಂಪ್ಯೂಟರ್ ಲ್ಯಾಬ್ ಸೌಲಭ್ಯಗಳನ್ನು ಒಳಗೊಂಡಿದೆ.
ಸಂಜೆ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಸೆಮಿಸ್ಟರ್ ಪರೀಕ್ಷೆಯಲ್ಲಿ ಅತ್ಯುತ್ತಮವಾದ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ.ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಸದೃಢತೆಗೆ ಕ್ರೀಡೆ, NCC, NSS, ಸ್ಕೌಟ್ ಮತ್ತು ಗೈಡ್ಸ್ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸಂಜೆ ಕಾಲೇಜು ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಂಡು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ.
ಸರ್ಕಾರದ ಅತ್ಯಂತ ಕಡಿಮೆ ಶುಲ್ಕದೊಂದಿಗೆ ಬಿಕಾಂ ಪದವಿ ಅಥವಾ ಬಿಸಿಎ ಪದವಿ ಶಿಕ್ಷಣವನ್ನು ಪಡೆಯಲು ಸುವರ್ಣಾವಕಾಶವನ್ನು ಸರ್ಕಾರಿ ಪ್ರಥಮ ದರ್ಜೆ ಸಂಜೆ ಕಾಲೇಜು ಕಲ್ಪಿಸಿದೆ. ದ್ವಿತೀಯ ಪಿಯುಸಿ, ಡಿಪ್ಲೊಮ ಮತ್ತು ITI ಪಾಸಾದ ಆಸಕ್ತ ವಿದ್ಯಾರ್ಥಿಗಳು ಸಂಜೆ ಕಾಲೇಜಿಗೆ ಸೇರಬಹುದು ಎಂದು ಪ್ರಾಂಶುಪಾಲರಾದ ಡಾ.ಕೊಟ್ರಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 8277272947 ಸಂಪರ್ಕಿಸಿ.



