ದಾವಣಗೆರೆ: ವಿಶ್ವ ಪರಿಸರ ದಿನಾಚರಣೆ-2025ರಂದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಆಚರಿಸುವ ಮೂಲಕ ಪರಿಸರ ದಿನಾಚರಣೆಯನ್ನು ಆಚರಿಸಲಾಗುವುದು. ಇದರ ಅಂಗವಾಗಿ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಆಯೋಜಿಸಲಾಗಿದೆ.
ಜೂನ್ 2 ರಂದು ಪ್ರಬಂಧ ಸ್ಪರ್ಧೆ
ಪ್ಲಾಸ್ಟಿಕ್ ಮಾಲಿನ್ಯ ಕೊನೆಗೊಳಿಸುವ ವಿಧಾನಗಳು, 2. ಈ ವರ್ಷ ಪರಿಸರ ಸಂರಕ್ಷಣೆಗೆ ನನ್ನ ಕೊಡುಗೆ, ಹಸಿರು ಮನೆ ಪರಿಣಾಮ ಮತ್ತು ನಿಯಂತ್ರಣ ಕ್ರಮಗಳು, (ಇದರಲ್ಲಿ ಯಾವುದಾದರು ಒಂದು ವಿಷಯದ ಬಗ್ಗೆ ಪ್ರಬಂಧ ಬರೆಯುವುದು .ಹಾಗೂ ಶಾಲೆಗಳು ಮುಖ್ಯ ಶಿಕ್ಷಕರು ಪ್ರಬಂಧದ ಬಗ್ಗೆ ಮೊದಲೇ ಮಾಹಿತಿ ಹಾಗೂ ಸಮಯಾವಕಾಶ ನೀಡಿ ನಂತರ ಸ್ಪರ್ಧೆಯನ್ನು ನಡೆಸುವುದು)
ಜೂನ್ 3ರ ಸ್ಪರ್ಧೆ
ಜೀವ ಸಂಕುಲದ ಉಳಿವಿಗೆ ಪರಿಸರ ಸಂರಕ್ಷಣೆ, ಹಾಗೂ ಚರ್ಚಾ ಸ್ಪರ್ಧೆ, ಜಾಗತಿಕ ತಾಪಮಾನ ಮತ್ತು ಭೂಮಂಡಲದ ಸಂರಕ್ಷಣೆ,ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪ್ರತಿ ಶಾಲೆಯಲ್ಲಿ ಕನಿಷ್ಠ 20 ಸಸಿಗಳನ್ನು ನೆಡುವುದು, ಹಾಗೂ ಪ್ರತಿ ಗಿಡದ ಮುಂದೆ ವಿದ್ಯಾರ್ಥಿಯ ಹೆಸರಿನ ನಾಮಫಲಕ ನೆಡುವುದು.
ಜೂನ್ 5 ರಂದು ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಮನೆಯಲ್ಲಿರುವ ಪ್ಲಾಸ್ಟಿಕ್ ಬಾಟಲ್ ಗಳನ್ನು ತೆಗೆದುಕೊಂಡು ಬಂದು ಶಾಲೆಯಲ್ಲಿರುವ ವೇಸ್ಟ್ ಬಾಟಲ್ ಗಳನ್ನು ಸಂಗ್ರಹ ಮಾಡುವ ಡ್ರಮ್ ನಲ್ಲಿ ಹಾಕುವುದು ತದನಂತರ ಶಾಲೆಯವರು ಸಂಜೆ 05ಗಂಟೆಗೆ ತಮ್ಮ ಶಾಲೆಯಿಂದ ಒಟ್ಟಾರೆ ಸಂಗ್ರಹಿಸಿದ ಬಾಟಲ್ ಗಳನ್ನು ತೂಕ ಮಾಡಿ ಬ್ಲಾಕ್ ಹಂತದವರೆಗೆ ಮಾಹಿತಿ ನೀಡುವುದು. ಈ ಮಾಹಿತಿಯನ್ನು ಬಿ.ಆರ್.ಸಿ ರವರು ಜಿಲ್ಲಾ ಹಂತಕ್ಕೆ ನೀಡುವುದು.
ಮನೆ ಹಾಗೂ ಶಾಲೆಯಲ್ಲಿ ಪರಿಸರ ಜಾಗೃತಿ ಕುರಿತು ಅನುಸರಿಸಬಹುದಾದ ಅಂಶಗಳ ಕುರಿತು ವಿದ್ಯಾರ್ಥಿಗಳಿಗೆ ಟಿಪ್ಪಣಿ, ನೀರು ಪೋಲಾಗುವುದನ್ನು ತಪ್ಪಿಸುವುದು. ಹಸಿ ತರಕಾರಿ ಹಾಕುವ ಗೊಬ್ಬರಗುಂಡಿ, ಸಾರ್ವಜನಿಕ ವಾಹನಗಳನ್ನು ಬಳಸುವುದು, ಬೈಸಿಕಲ್ ಬಳಕೆ, ಇ-ತ್ಯಾಜ್ಯ ಕುರಿತು ಅರಿವು ಮೂಡಿಸುವುದು, ಕಾಲಾಡ್ನಿಗೆ ಮಹತ್ವ ತಿಳಿಸುವುದು, ಅರಣ್ಯ ಇಲಾಖೆ ಸಹಯೋಗದೊಂದಿಗೆ ಲಭ್ಯವಿರುವ ಸ್ಥಳಗಳಲ್ಲಿ ಮಣ್ಣಿನ ಬೀಜದ ಉಂಡೆಗಳನ್ನು ಹಾಕುವುದು, ಅನಾವಶ್ಯಕ ಪೇಪರ್ ಬಳಕೆಯನ್ನು ಕಡಿಮೆ ಮಾಡುವುದು, ಪ್ರತಿ ವಿದ್ಯಾರ್ಥಿಯ ಮನೆ ಮುಂದೆ ಸಸಿ ನಡುವಂತೆ ಜಾಗೃತಿ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೊಟ್ರೇಶ್.ಜಿ ತಿಳಿಸಿದ್ದಾರೆ.



