ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್‌ಆರ್ಟಿಸಿ) ತನ್ನ ಮಹತ್ವಾಕಾಂಕ್ಷೆಯ ಎಲೆಕ್ಟ್ರಿಕ್ ಬಸ್ ಕಾರ್ಯಾಚರಣೆ ಬೆಂಗಳೂರಿನಿಂದ ಮೈಸೂರಿಗೆ ಜನವರಿ 16 ರಿಂದ ಆರಂಭಿಸಲಿದೆ. ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಬಸ್ ನಿಲ್ದಾಣಗಳಲ್ಲಿ ಚಾರ್ಜಿಂಗ್ ಕೇಂದ್ರ ಕಾರ್ಯ ಪ್ರಗತಿಯಲ್ಲಿದ್ದು, ಫೆಬ್ರುವರಿ ಅಂತ್ಯದ ವೇಳೆಗೆ ಬೆಂಗಳೂರಿನಿಂದ ಆರು ಮಾರ್ಗಗಳಲ್ಲಿ 50 ಇ-ಬಸ್ ಸೇವೆ ಆರಂಭವಾಗಲಿದೆ. ಇ-ಬಸ್ ಗಳು ದೂರದರ್ಶನ, ಪ್ರೀಮಿಯಂ ಸೀಟ್ ಗಳು, ವೈಯಕ್ತಿಕ ಚಾರ್ಜಿಂಗ್ ಸಾಕೆಟ್ ಗಳು, ಎಸಿ ವೆಂಟ್ ಸೇರಿ ಇತರೆ ಸೌಕರ್ಯ ಇರಲಿದೆ.
ಈ ಬಗ್ಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಎಂಡಿ ಅನ್ಬು ಕುಮಾರ್ ಮಾಹಿತಿ ನೀಡಿದ್ದಾರೆ, ವಿವಿಧ ಕಾರಣಗಳಿಂದಾಗಿ ಇ-ಬಸ್ ಸೇವೆಯನ್ನು ಪ್ರಾರಂಭಿಸುವುದು ಮೂರು ತಿಂಗಳು ವಿಳಂಬವಾಗಿದೆ. ಈಗ, ಡಿಸೆಂಬರ್ 31 ರಂದು ನಮಗೆ ವಿತರಿಸಲಾದ ಇ-ಬಸ್ ಯಶಸ್ವಿಯಾಗಿ ಟ್ರಯಲ್ ರನ್ ಗಳನ್ನು ಪೂರ್ಣಗೊಳಿಸಿದೆ. ಮತ್ತು ಮೊದಲ ಎಲೆಕ್ಟ್ರಿಕ್ ಬಸ್ ಸೇವೆ ಜನವರಿ 16 ರಂದು ಬೆಂಗಳೂರಿನಿಂದ ಮೈಸೂರಿಗೆ ಪ್ರಾರಂಭವಾಗಲಿದೆ. ಬಸ್ ಬೆಂಗಳೂರಿನಿಂದ ಮೈಸೂರಿಗೆ ತಡೆರಹಿತವಾಗಿ ಚಲಿಸುತ್ತದೆ. ಇದು ಪ್ರೀಮಿಯಂ ಸೇವೆಯಾಗಿದೆ. ಸದ್ಯ ಪಾಸ್ ಗಳ ಅನುಮತಿ ಇರುವುದಿಲ್ಲ ಎಂದಿದ್ದಾರೆ.
ಒಂದೇ ಬಾರಿ ಚಾರ್ಜ್ ಮಾಡಿದರೆ ಬಸ್ಸುಗಳು 300 ಕಿಮೀ ಓಡುವ ನಿರೀಕ್ಷೆಯಿದೆ. ಬೆಂಗಳೂರಿನಿಂದ ಮಡಿಕೇರಿ, ವಿರಾಜಪೇಟೆ, ಚಿಕ್ಕಮಗಳೂರು, ದಾವಣಗೆರೆ ಮತ್ತು ಶಿವಮೊಗ್ಗಕ್ಕೆ ಸೇವೆಯನ್ನು ಪ್ರಾರಂಭಿಸಲಾಗುವುದು. ಫೆಬ್ರುವರಿ ವೇಳೆಗೆ 50 ಇ-ಬಸ್ಗಳನ್ನು ಪಡೆಯುವ ನಿರೀಕ್ಷೆಯಿದೆ. ಮತ್ತು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ಚಾರ್ಜಿಂಗ್ ಕೇಂದ್ರಗಳು ಜಾರಿಯಲ್ಲಿವೆ ಮತ್ತು ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಬಸ್ ನಿಲ್ದಾಣಗಳಲ್ಲಿ ಪ್ರಗತಿಯಲ್ಲಿದೆ ಎಂದರು.
ಗ್ರಾಸ್ ಕಾಸ್ಟ್ ಕಾಂಟ್ರಾಕ್ಟ್ (ಜಿಸಿಸಿ) ಅಡಿಯಲ್ಲಿ ಖಾಸಗಿ ಆಪರೇಟರ್ ಒಲೆಕ್ಟ್ರಾ ಬಸ್ಗಳನ್ನು ನಿರ್ವಹಿಸಲಿದೆ ಮತ್ತು ಕೆಎಸ್ಆರ್ಟಿಸಿ ಕಾರ್ಯಾಚರಣೆಯ ವೆಚ್ಚವಾಗಿ ಕಿಮೀಗೆ 55 ರೂಪಾಯಿಗಳನ್ನು ಪಾವತಿಸಲಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮುಂದಿನ ವಾರಗಳಲ್ಲಿ 650 ಸಾಮಾನ್ಯ ಬಸ್ಗಳು ಮತ್ತು 20 ವೋಲ್ವೋ ಬಸ್ಗಳನ್ನು ಸೇರಿಸುತ್ತಿದೆ ಮತ್ತು ಇದು ಗ್ರಾಮೀಣ ಪ್ರದೇಶಗಳಲ್ಲಿ ಬಸ್ಗಳ ಕೊರತೆಯನ್ನು ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ತಿಳಿಸಿದರು.



