ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಆಜಾದ್ ನಗರದಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ 39.50 ಲಕ್ಷವನ್ನು ಎಫ್‌ಎಸ್‌ಟಿ ಹಾಗೂ ಪೊಲೀಸರು ಇಂದು ( ಏ.15) ವಶಕ್ಕೆ ಪಡೆದಿದ್ದಾರೆ.
ಈ ಹಣ ಇಂಡಿಯನ್-1 ಪ್ರೈವೇಟ್ ಲಿಮಿಡೆಟ್ ಬ್ಯಾಂಕ್‌ಗೆ ಸೇರಿದ್ದಾಗಿದೆ. ಎಟಿಎಂಗೆ ತುಂಬಲು ಹೋಗುತ್ತಿತ್ತು ಎಂದು ಹೇದ್ದಾರೆ. ಆದರೆ, ಫ್ಲೈಯಿಂಗ್ ಸ್ಕ್ವಾಡ್ ತಂಡ ಪರಿಶೀಲಿಸಿದಾಗ ಯಾವುದೇ ಸೂಕ್ತ ದಾಖಲೆ ನೀಡಿಲ್ಲ. ಹೀಗಾಗಿ ಹಣ ಜಪ್ತಿ ಮಾಡಲಾಗಿದೆ.ಕೂಡಲೇ ಸಹಾಯಕ ಚುನಾವಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಆದಾಯ ತೆರಿಗೆ ಇಲಾಖೆಯವರಿಗೆ ಒಪ್ಪಿಸಲಾಗಿದೆ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.