ದಾವಣಗೆರೆ: ಫೆ.19 ರಿಂದ ಮೇ 10 ರವರೆಗೆ ದಾವಣಗೆರೆ ಮಹಾನಗರ ಪಾಲಿಕೆಯ ವಲಯ ಕಚೇರಿಯಲ್ಲಿ ಇ-ಖಾತಾ ಅಭಿಯಾನವನ್ನು (e-khata abhiyan) ಆಯೋಜಿಸಲಾಗಿದೆ.ನಗರದಲ್ಲಿನ ನಿವೇಶನಗಳು (sites), ಕಟ್ಟಡಗಳು (building) ಭೂಪರಿವರ್ತನೆಯಾಗದೆ ಉಪವಿಭಜನೆ ಮಾಡಿ ಮಾರಾಟ ಮಾಡಿರುವ ನಿವೇಶನ,ಕಟ್ಟಡಗಳಿಗೆ 24 ಸೆಪ್ಟೆಂಬರ್ 2024 ರ ಒಳಗೆ ನೋಂದಣೆಯಾಗಿರುವ ಆಸ್ತಿಗಳಿಗೆ ಇ-ಆಸ್ತಿ ತಂತ್ರಾಂಶದಿಂದ 2ಎ ನಮೂನೆ ಸೃಜಿಸಿ ನೀಡಲಾಗುವುದು.
- ಇ-ಖಾತಾಗೆ ಅಗತ್ಯ ದಾಖಲೆಗಳು
- 1 ಸರ್ಕಾರದಿಂದ ವಿತರಿಸಿದ ಯಾವುದೇ ಬಗೆಯ ಗುರುತಿನ ಚೀಟಿ, ಆಸ್ತಿ ಮಾಲೀಕರ ಫೋಟೋ
- 3 ಮಾಲೀಕತ್ವ ದೃಢೀಕರಿಸುವ ನೋಂದಾಯಿತ ದಾಖಲೆಗಳು
- 4. ಸ್ವತ್ತಿನ ಋಣಭಾರ ಪ್ರಮಾಣ ಪತ್ರ
- 5 ಸ್ವತ್ತಿನ ಛಾಯಾಚಿತ್ರ
- 6 ಆಸ್ತಿ ತೆರಿಗೆ ಪಾವತಿಸಿದ ರಶೀದಿ
ಈ ಮೇಲಿನ ದಾಖಲೆಗಳೊಂದಿಗೆ ಸಂಬಂಧಪಟ್ಟ ನಗರ ಸ್ಥಳೀಯ ಸಂಸ್ಥೆಗಳಿಗೆ ಭೇಟಿ ನೀಡಿ ಇ-ಖಾತೆ ದಾಖಲೆಯನ್ನು ಪಡೆದುಕೊಳ್ಳಬಹುದು. ಈಗಾಗಲೇ ಇರುವ ಕೈಬರಹ ಖಾತೆಗೆ ಇ-ಖಾತಾ ಪಡೆಯಿರಿ.
ಹೆಚ್ಚಿನ ಮಾಹಿತಿಗಾಗಿ ಮಹಾನಗರಪಾಲಿಕೆಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಸಂ:08192-234444, ವಾಟ್ಸ್ ಆಪ್ ನಂ: 8277234444 ನ್ನು ಸಂಪರ್ಕಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ತಿಳಿಸಿದ್ದಾರೆ.