ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಸಕ ಶಾಮನೂರು ಶಿವಶಂಕರಪ್ಪ ಒಡೆತನದ ಮೆಡಿಕಲ್ ಕಾಲೇಜುಗಳ ಮೇಲೆ ಜಾರಿ ನಿರ್ದೇಶನಾಲಯ(ಇಡಿ) ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೂರು ಕಾಲೇಜುಗಳಲ್ಲಿ ಅಧಿಕಾರಿಗಳಿಂದ ಕಡತ ಪರಿಶೀಲನೆ ನಡೆಸಲಾಗುತ್ತಿದ್ದು, ಆರು ಜನ ಇಡಿ ಅಧಿಕಾರಿಗಳ ತಂಡ ದಾವಣಗೆರೆ ಜೆಜೆಎಂ, ಎಸ್‌ಎಸ್ ಮೆಡಿಕಲ್ ಕಾಲೇಜ್ ಹಾಗೂ ಬಾಪೂಜಿ ಡೆಂಟಲ್ ಕಾಲೇಜ್ ಗಳಲ್ಲಿ ದಾಖಲೆ ಪರಿಶೀಲಿಸಿದೆ.
ವಿದ್ಯಾರ್ಥಿಗಳ ಪ್ರವೇಶ ಹಾಗೂ ಕಾಲೇಜ್ ಆಡಳಿತ ಮಂಡಳಿ ಸಂಗ್ರಹಿಸಿದ ಶುಲ್ಕ ಮತ್ತು ಸರ್ಕಾರ ನಿಗದಿ ಮಾಡಿದ ಶುಲ್ಕದ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲ ವಿದ್ಯಾರ್ಥಿಗಳಿಂದ ಶುಲ್ಕ ತುಂಬಿದ ವಿವರವನ್ನೂ ಸಹ ಅಧಿಕಾರಿಗಳು ಪಡೆದಿದ್ದಾರೆ. ಗೋವಾ ಹಾಗೂ ಬೆಳಗಾವಿಯಿಂದ ಬಂದ ಇಡಿ ಅಧಿಕಾರಿಗಳ ತಂಡದಿಂದ ಈ ದಾಳಿ ನಡೆಸಿದೆ.