ದಾವಣಗೆರೆ: ರಾಟ್ ವೀಲರ್ ತಳಿಯ ಎರಡು ನಾಯಿಗಳ ದಾಳಿಗೆ (Dog attack) 38 ವರ್ಷದ ಮಹಿಳೆ ಸಾವನ್ನಪ್ಪಿದ ಘಟನೆ ದಾವಣಗೆರೆ ಹೊರವಲಯದ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ. ಅನಿತಾ ಮೃತ ಮಹಿಳೆಯಾಗಿದ್ದಾರೆ.
ದಾವಣಗೆರೆ: ಬೇಕರಿ ಉತ್ಪನ್ನಗಳ ತಯಾರಿಕೆ ತರಬೇತಿ
ರಾತ್ರಿ ವೇಳೆ ರಾಟ್ ವೀಲರ್ ನಾಯಿಗಳನ್ನು ಅದರ ಮಾಲೀಕರು ಬಿಟ್ಟು ಹೋಗಿದ್ದರು. ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಅನಿತಾ ಮೇಲೆ 2 ನಾಯಿಗಳು ದಾಳಿ ಮಾಡಿವೆ. ಗಂಭೀರ ಗಾಯಗೊಂಡಿದ್ದ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನ್ನಪ್ಪಿದ್ದಾರೆ. ಸದ್ಯ ನಾಯಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ದಾವಣಗೆರೆ: ತುಂತುರು ನೀರಾವರಿ- ಶೇ. 90ರಷ್ಟು ಸಹಾಯಧನಕ್ಕೆ ಅರ್ಜಿ ಆಹ್ವಾನ
ರಾತ್ರಿ ವೇಳೆ ಮಲ್ಲಶೆಟ್ಟಿಹಳ್ಳಿಯಿಂದ ಹೊನ್ನೂರು ಗೊಲ್ಲರ ಹಟ್ಟಿ ಕಡೆ ರಸ್ತೆಯಲ್ಲಿ ನಡೆದುಕೊಂಡು ಅನಿತಾ ಹೋಗುತ್ತಿದ್ದರು. ಇದ್ದಕ್ಕಿದ್ದಂತೆ ನಾಯಿಗಳು ಅನಿತಾ ಮೇಲೆ ಎರಗಿವೆ. ರಾಟ್ ವೀಲರ್ ನಾಯಿಗಳ ದಾಳಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ದಾಳಿ ಮಾಡಿದ ನಾಯಿಗಳನ್ನು ಹಂದಿ ಹಿಡಿಯುವ ತಂಡದಿಂದ ಸೆರೆಹಿಡಿಯಲಾಗಿದೆ. ಆ ಮೂಲಕ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ. ಆಟೋದಲ್ಲಿ ತಂದು ಈ ರಾಟ್ ವೀಲರ್ ನಾಯಿಗಳನ್ನು ಬಿಟ್ಟು ಹೋದ ಮಾಲೀಕರ ವಿರುದ್ದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಹಿಳೆಗೆ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿದೆ. ನಾಯಿಗಳ ಮಾಲೀಕರ ಪತ್ತೆಗೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಶೋಧ ನಡೆಸಿದ್ದಾರೆ.



