ದಾವಣಗೆರೆ: ನಗರದ ಹೊರ ವಲಯದಲ್ಲಿ ರಾಟ್ವೀಲರ್ ನಾಯಿಗಳ ದಾಳಿಯಿಂದ (Dog attack) ಮಹಿಳೆ ಸಾವನ್ನಪ್ಪಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಯಿ ಮಾಲೀಕನ್ನು ಪೊಲೀಸರು ಪತ್ತೆ ಮಾಡಿ ಬಂಧನ ಮಾಡಿದ್ದಾರೆ.
ಮಹಿಳೆ ಸಾವಿನ ನಂತರ ನಾಯಿ ಮಾಲೀಕನ ಇಂಧನಕ್ಕೆ ಒತ್ತಡ ಹೆಚ್ಚಳ ಹಿನ್ನೆಲೆ ನಾಯಿ ಮಾಲೀಕ ಶೈಲೇಂದ್ರ ಕುಮಾರ್ರನ್ನು ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ನಗರದ ಶಿವಾಲಿ ಚಿತ್ರಮಂದಿರ ಮಾಲೀಕರ ಅಳಿಯ ಎಂಬುದು ಗೊತ್ತಾಗಿದೆ. ಇನ್ನು ಮಹಿಳೆ ಬಲಿ ಪಡೆದಿದ್ದ ಎರಡು ನಾಯಿಗಳು ಸಹ ಸಾವನ್ನಪ್ಪಿವೆ.
ಕ್ವಿಂಟಾಲ್ ಗೆ 2400 ರೂ. ಗಳಂತೆ ಡಿಸ್ಟಿಲರಿಗಳ ಮೂಲಕ ಮೆಕ್ಕೆಜೋಳ ಖರೀದಿಗೆ ಸಿದ್ಧತೆ; ಜಿಲ್ಲಾಧಿಕಾರಿ
ಆರೋಪಿ ಶೈಲೇಂದ್ರ ಕುಮಾರ್ ಹಲವು ವರ್ಷಗಳಿಂದ ರಾಟ್ ವೀಲರ್ ಶ್ವಾನಗಳನ್ನ ಸಾಕುತ್ತಿದ್ದರು. ಡಿ.5ರಂದು ಶ್ವಾನಗಳನ್ನು ಆಟೋದಲ್ಲಿ ತಂದು ಜಮೀನಿನಲ್ಲಿ ಬಿಟ್ಟುಹೋಗಿದ್ದರು. ಈ ವೇಳೆ ಮಲ್ಲಶೆಟ್ಟಿಹಳ್ಳಿ ನಿವಾಸಿ ಅನಿತಾ(38) ಮೇಲೆ ದಾಳಿ ಮಾಡಿದ್ದವು. ದಾವಣಗೆರೆ ತಾಲೂಕಿನ ಹೊನ್ನೂರು ಕ್ರಾಸ್ ಬಳಿ ಘಟನೆ ನಡೆದಿತ್ತು.ಮಹಿಳೆ ಬಲಿ ಪಡೆದಿದ್ದ ಎರಡು ರಾಟ್ವೀಲರ್ ನಾಯಿ ಸಾವನ್ನಪ್ಪಿವೆ. ಘಟನೆ ಬಳಿಕ ಗ್ರಾಮಸ್ಥರು ಹಾಗೂ ಹಂದಿ ಹಿಡಿಯುವವರು ಸೇರಿ ನಾಯಿಗಳನ್ನು ಸೆರೆಹಿಡಿಯಲಾಗಿತ್ತು.



