ದಾವಣಗೆರೆ: ಕರ್ಕಶ ಶದ್ಧದ ಹಾರ್ನ್, ಸೈಲೆನ್ಸರ್ ವಿರುದ್ಧ ಜಿಲ್ಲಾ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, 33 ಪ್ರಕರಣ ದಾಖಲಿಸಿ 16,500/- ಸಾವಿರ ರೂ ದಂಡ ಹಾಕಲಾಗಿದೆ.
ದಾವಣಗೆರೆ ದಾವಣಗೆರೆ ಜಿಲ್ಲೆಯಾದ್ಯಂತ ಇಂದು (ಆ.7) ಎಸ್ಪಿ ಉಮಾ ಪ್ರಶಾಂತ್ ಹಾಗೂ ಹೆಚ್ಚುವರಿ ಎಸ್ಪಿ ವಿಜಯಕುಮಾರ ಎಂ ಸಂತೋಷ ಮಾರ್ಗದರ್ಶನದಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ತಂಡ ಸಂಚಾರ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸಿದರು. ಇದೇ ವೇಳೆ ವಿವಿಧ ಕಡೆ ಕರ್ಕಶ ದ್ವನಿ ಸೂಸುವ ಸೈಲೆನ್ಸರ್ (Defective Silencers), ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ ವಾಹನ ಸವಾರರಿಗೆ ದಂಡ ವಿಧಿಸಲಾಗಿದೆ.
ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳಿಗೆ ಸಂಬಂಧಿಸದಂತೆ ಒಟ್ಟು 33 ಪ್ರಕರಣಗಳಲ್ಲಿ 16,500/- ಸಾವಿರ ರೂ ದಂಡ, ಸೇರಿದಂತೆ ಇತರೆ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ದಾಖಲಾಗಿರುತ್ತವೆ. ಇನ್ನೂ ಮುಂದೆಯೂ ಇದೇ ರೀತಿಯ ಕಾರ್ಯಚರಣೆಯು ದಾವಣಗೆರೆ ಜಿಲ್ಲೆಯಲ್ಲಿ ನಡೆಯಲಿದ್ದು ವಾಹನ ಸವಾರರು ಕಡ್ಡಾಯವಾಗಿ ಚಾಲನಾ ಪರವಾನಿಗೆ, ವಾಹನದ ಇನ್ಶೂರೆನ್ಸ್, ಹೊಂದಿರಬೇಕು.
ವಾಹನಗಳಲ್ಲಿ ಕರ್ಕಶ ದ್ವನಿ ಸೂಸುವ ಸೈಲೆನ್ಸರ್ (Defective Silencers), ಕರ್ಕಶ ದ್ವನಿ ಸೂಸುವ ಹಾರ್ನ್ (Shrill Horns) ಗಳ ನ್ನು ಹಾಕಬಾರದು ಹಾಗೂ ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸ ಬೇಕು, ಟ್ರಿಪಲ್ ರೈಡಿಂಗ್, ಏಕಮುಖ ಸಂಚಾರ ಮಾಡಬಾರದು, ವಾಹನ ಸವಾರರು ಸೀಟ್ ಬ್ಯಾಲ್ಟ್ ಧರಿಸಿರಬೇಕು. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ವಾಹನ ಚಾಲನೆ ಮಾಡುವ ಎಲ್ಲರೂ ಪಾಲಿಸಬೇಕು – ಒಂದು ವೇಳೆ ಸಂಚಾರ ನಿಯಮ ಪಾಲಿಸದೇ ಹೋದರೆ ಅಂತಹ ಚಾಲಕರ ಮೇಲೆ ಇದೇ ರೀತಿ ಕ್ರಮ ಜರುಗಿಸಲಾಗುವದು ಎಂದು ಎಸ್ಪಿ ಸೂಚಿಸಿದರು.



