ದಾವಣಗೆರೆ: ಕುರಿಗೆ ಮೇವು( ಸೊಪ್ಪು) ತರಲು ಹೋಗಿದ್ದ ಯುವಕ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿರುವ ಘಟನೆ ದಾವಣಗೆರೆ ತಾಲೂಕಿನ ಬಿ.ಚಿತ್ತಾನಹಳ್ಳಿಯಲ್ಲಿ ನಡೆದಿದೆ.
ಬಸವರಾಜ್ (18) ಮೃತ ಯುವಕನಾಗಿದ್ದಾನೆ. ದಿವಂಗತ ಮಂಜುನಾಥ್, ಸೀತಮ್ಮ ದಂಪತಿಗಳ ದ್ವಿತೀಯ ಪುತ್ರ ಬಸವರಾಜ್ ಮುಂಜಾನೆ ಕುರಿಗಳಿಗೆ ಮೇವು ತರಲು ತೆರಳಿದ್ದ ವೇಳೆ ಅವಘಡ ನಡೆದಿದೆ.
ಮರ ಹತ್ತಿ ಸೊಪ್ಪು ಕತ್ತರಿಸುವ ವೇಳೆ ವಿದ್ಯುತ್ ತಗುಲಿ ಯುವಕ ಮೃತಪಟ್ಟಿದ್ದಾನೆ. ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.