ದಾವಣಗೆರೆ: ಅಮೆರಿಕಾದಲ್ಲಿ ನೆಲೆಸಿದ್ದ ದಾವಣಗೆರೆ ಮೂಲದ ದಂಪತಿ ಹಾಗೂ ಮಗು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಅಮೆರಿಕಾದ ಮೇರಿಲ್ಯಾಂಡ್ ರಾಜ್ಯದ ಬಾಲ್ಟಿಮೋರ್ನಲ್ಲಿ ವಾಸವಾಗಿದ್ದ ಯೋಗೇಶ್ ಹೊನ್ನಾಳ್ (37), ಅವರ ಪತ್ನಿ ಪ್ರತಿಭಾ ಹೊನ್ನಾಳ್ (35), ಪುತ್ರ ಯಶ್ ಹೊನ್ನಾಳ್ (6) ಮೃತಪಟ್ಟವರು.
ದಂಪತಿಗಳು ಜಿಲ್ಲೆಯ ಜಗಳೂರು ತಾಲೂಕಿನ ಹಾಲೆಕಲ್ಲು ಗ್ರಾಮದ ನಿವಾಸಿಗಳಾಗಿದ್ದು, ಕುಟುಂಬದವರು ಸದ್ಯ ದಾವಣಗೆರೆಗೆ ನೆಲೆಸಿದ್ದಾರೆ. 9 ವರ್ಷಗಳ ಹಿಂದೆ ಯೋಗೇಶ್ ಹಾಗೂ ಪ್ರತಿಭಾ ಮದುವೆಯಾಗಿದ್ದು, ಉದ್ಯೋಗ ನಿಮಿತ ಅಮೆರಿಕಾದಲ್ಲಿ ನೆಲೆಸಿದ್ದರು. ಯೋಗೇಶ್ ಮತ್ತು ಅವರ ಪತ್ನಿ ಪ್ರತಿಭಾ ಇಬ್ಬರೂ ವೃತ್ತಿಯಲ್ಲಿ ಎಂಜಿನಿಯರ್ ಆಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು.
ಅನುಮಾನಾಸ್ಪದವಾಗಿ ಪತಿ, ಪತ್ನಿ ಹಾಗೂ ಪುತ್ರ ಸಾವನಪ್ಪಿದ್ದಾರೆ. ಮೂವರ ಸಾವಿಗೆ ಸ್ಪಷ್ಟವಾದ ಕಾರಣ ತಿಳಿದುಬಂದಿಲ್ಲ. ಮೃತರ ಪಾರ್ಥಿವ ಶರೀರವನ್ನು ಸ್ವದೇಶಕ್ಕೆ ತರಿಸಿಕೊಡುವಂತೆ ಮೃತರ ಕುಟುಂಬಸ್ಥರು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.



