ದಾವಣಗೆರೆ; ಜಿಲ್ಲೆಯ ನ್ಯಾಮತಿ ಪಟ್ಟಣದ ಶಿವಾನಂದಪ್ಪ ಬಡಾವಣೆಯ ನಿವಾಸಿಯಾದ ಯುವಕನೋರ್ವ ಸವಳಂಗ ಕೆರೆಯಲ್ಲಿ ವಾಹನ ತೊಳೆಯಲು ಹೋಗಿ ಆಕಸ್ಮಿಕವಾಗಿ ಮುಳುಗಿ ಸಾವು ಕಂಡಿರುವ ಘಟನೆ ನಡೆದಿದೆ.
ಶಿವಾನಂದಪ್ಪ ಬಡಾವಣೆಯ ಮಹಮ್ಮದ್ ಹುಸೇನ್ ಆಲಿಯಾಸ್ ಸಿದ್ದಿಕ್ಕಿ ಬಾಷಾ (21) ಎ೦ಬುವವರು ಗೂಡ್ಸ್ ವಾಹನ ತೊಳೆಯಲು ಹೋಗಿ ಮುಳುಗಿ ಸಾವನ್ನಪ್ಪಿದ್ದಾನೆ. ಈ ವ್ಯಕ್ತಿ ನ್ಯಾಮತಿಯಿ೦ದ ವಾಹನನಲ್ಲಿ ಸೀಮೆಂಟನ್ನು ತೆಗೆದುಕೊಂಡು ನುಗ್ಗಿ ಮಲ್ಲಾಪುರದಲ್ಲಿ ಖಾಲಿ ಮಾಡಿಕೊ೦ಡು ಬ೦ದು ಕೆರೆಯಲ್ಲಿ ವಾಹನ ತೊಳೆಯುತ್ತಿದ್ದ, ಆಗ ಆಕಸ್ಮಿಕವಾಗಿ ಮುಳುಗಿ ಸಾವು ಕ೦ಡಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



