Connect with us

Dvgsuddi Kannada | online news portal | Kannada news online

ದಾವಣಗೆರೆ: ಗಣೇಶ ಚತುರ್ಥಿ, ಈದ್ ಮಿಲಾದ್ ಮೆರವಣಿಗೆಗೆ ಡಿಜೆ ನಿಷೇಧ: ಜಿಲ್ಲಾಧಿಕಾರಿ

dc davangere

ದಾವಣಗೆರೆ

ದಾವಣಗೆರೆ: ಗಣೇಶ ಚತುರ್ಥಿ, ಈದ್ ಮಿಲಾದ್ ಮೆರವಣಿಗೆಗೆ ಡಿಜೆ ನಿಷೇಧ: ಜಿಲ್ಲಾಧಿಕಾರಿ

ದಾವಣಗೆರೆ: ಕಲೆ ಸಾಂಸ್ಕೃತಿಕತೆಗೆ ಹೆಸರುವಾಸಿಯಾದ ದೇಶದಲ್ಲಿ ಪರಿಸರ ಸ್ನೇಹಿ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಉಳಿವಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಸಹಯೋಗದಲ್ಲಿ ಗಣೇಶ ಚತುರ್ಥಿ ಮತ್ತು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಆಯೋಜಿಸಲಾದ ನಾಗರೀಕ ಸೌಹಾರ್ಧತಾ ಸಭೆಯ ಅಧ್ಯಕ್ಷತೆ ವಹಸಿ ಅವರು ಮಾತನಾಡಿದರು.

ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ ಈ ದೇಶದಲ್ಲಿ ಹಬ್ಬಗಳು ಸಂಭ್ರಮ ಸಡಗರದಿಂದ ಆಚರಣೆ ಮಾಡಬೇಕು. ಆದರೆ ಆ ಸಡಗರ ನಮಗೆ ಶೋಕಾಚರಣೆಯಾಗಬಾರದು. ಆದ್ದರಿಂದ ಹಿಂದೂ ಹಾಗೂ ಮುಸ್ಲೀಂ ಸಮುದಾಯದ ಜನತೆ ಯಾವುದೇ ರೀತಿಯ ಕೋಮು ಗಲಭೆ, ಶಾಂತಿ ಕದಡುವ ಕೆಲಸ ಮಾಡದಂತೆ ವ್ಯವಸ್ಥಿತವಾಗಿ ಆಚರಣೆ ಮಾಡಬೇಕು ಎಂದರು.

ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಯಾರಿಗೆ ಆಗಲೀ ಅಥವಾ ಅನ್ಯ ಜಾತಿ, ಕೋಮುಗಳ ಶಾಂತಿ ಕದಡುವಂಥವರನ್ನು ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತಹ ವೀಡಿಯೋ, ಆಡಿಯೋಗಳನ್ನು ಹಂಚಿಕೊಳ್ಳುವಂತಿಲ್ಲ. ಜಿಲ್ಲೆಯಲ್ಲಿ ಈಗಾಗಲೇ ಅಂತಹವರನ್ನು ಗುರುತಿಸಿ 28 ಗಡೀಪಾರು ಮಾಡಲಾಗಿದೆ. ಇಂತಹವರ ಬಗ್ಗೆ ಮಾಹಿತಿ ಇದ್ದಲ್ಲಿ ಹಾಗೂ ಮಧ್ಯ, ಮಾಧಕ ವಸ್ತುಗಳ ಬಳಕೆ ಮತ್ತು ಮಾರಾಟ ಕುರಿತು ಮಾಹಿತಿ ಇದ್ದಲ್ಲಿ ಮಾಹಿತಿ ನೀಡಿದಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೆರವಣಿಗೆಗೆ ಡಿಜೆ ನಿಷೇಧ

ಗಣೇಶಮೂರ್ತಿ ವಿಸರ್ಜನೆ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ಮತ್ತು ವಿಸರ್ಜನೆ ವೇಳೆ ಪೆÇಲೀಸ್ ಇಲಾಖೆ ನಮಗೆ ರಕ್ಷಣೆ ನೀಡಲು ಹಗಲಿರಲು ಶ್ರಮಿಸುತ್ತಾರೆ. ಈ ಬಾರಿ ಹಬ್ಬಗಳ ಆಚರಣೆ, ವಿಸರ್ಜನೆಗೆ ಡಿಜೆಗಳಿಗೆ ಅನುಮತಿ ನಿಷೇಧಿಸಲಾಗಿದೆ. ಇದರಿಂದ ಶಬ್ದ ಮಾಲಿನ್ಯ ಉಂಟಾಗುವುದಲ್ಲದೇ ಹಲವು ಘರ್ಷಣೆಗಳಿಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ಸಾರ್ವಜನಿಕರು ನಮ್ಮ ದೇಶದ ಕಲೆ, ಸಂಸ್ಕøತಿ ಸಾಂಸ್ಕøತಿಕತೆಗೆ ಹೆಸರಾದ ಸ್ಥಳೀಯ ಜಾನಪದ ಪ್ರಕಾರಗಳು, ಡೋಲು, ಮುಂತಾದವುಗಳನ್ನು ಮೆರವಣಿಗೆಗೆ ಬಳಸಿಕೊಂಡಲ್ಲಿ ಕಲಾವಿದರ ಹೊಟ್ಟೆಯು ತುಂಬಲಿದೆ. ನಮ್ಮ ಕಲೆ, ಸಂಸ್ಕøತಿ ಉಳಿಸಬೇಕಾದರೆ, ಅವುಗಳನ್ನು ಪ್ರೋತ್ಸಾಹಿಸಿ ಪೋಷಿಸಬೇಕು. ಡಿಜೆಗಳಿಗೆ ಪರ್ಯಾಯವಾಗಿ ಡೋಲು, ತಮಟೆ, ಜಾನಪದ ನೃತ್ಯ, ಸಾಂಸ್ಕøತಿಕ ರಸದೌತಣ ನೀಡುವುದರೊಂದಿಗೆ ಸನಾತನ ಸಂಸ್ಕೃತಿಯನ್ನು ಮತ್ತಷ್ಟು ಶ್ರೀಮಂತಗೊಳಿಸಬೇಕು. ಅಲ್ಲದೇ ಕಲೆ, ಸಂಸ್ಕøತಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಿದೆ ಎಂದು ತಿಳಿಹೇಳಿದರು.

ಪರಿಸರ ಸ್ನೇಹಿ ಗಣೇಶ ಮೂರ್ತಿ ಬಳಸಿ

ಪರಿಸರ ಮಾಲಿನ್ಯ ತಡೆಗಟ್ಟಲು ಜಿಲ್ಲಾಡಳಿತ ವತಿಯಿಂದ ಹಲವಾರು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ನಮ್ಮ ಜೀವ ಜಲವಾದ ತುಂಗಾಭದ್ರಾ ನದಿ ಮೂಲವನ್ನು ಉಳಿಸಬೇಕು. ಪರಿಸರ ಸ್ನೇಹಿ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಿ ಪರಿಸರ ಉಳಿವಿಗೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಸಾರ್ವಜನಿಕರು ಹಬ್ಬದ ಪ್ರಯುಕ್ತ ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್ ಅಳವಡಿಸಲು ಸಂಬಂಧಪಟ್ಟ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಮಾರ್ಗಗಳನ್ನು ಬದಲಾವಣೆ ಮಾಡದೆ ಜಿಲ್ಲಾಡಳಿತ ಸೂಚನೆಯಂತೆ ಪಾಲನೆ ಮಾಡಬೇಕು. ಮದ್ಯಪಾನ ಮಾಡಿ ಮೆರವಣಿಗೆಯಲ್ಲಿ ಭಾಗವಹಿಸುವುದರಿಂದ ನಮ್ಮ ಸಂಸ್ಕೃತಿಯನ್ನು ಹಾಳುಮಾಡಿದಂತಾಗುತ್ತದೆ. ಗಣೇಶಮೂರ್ತಿ ಪ್ರತಿಷ್ಟಾಪನೆ, ವಿಸರ್ಜನೆ ವೇಳೆ ವಿದ್ಯುತ್ ಅವಘಡಗಳು ಸಂಭವಿಸದಂತೆ ಅತ್ಯಂತ ಜಾಗೃತೆ ವಹಿಸಬೇಕು. ನಿಮ್ಮ ಶ್ರೇಯೋಭಿಲಾಷೆಗಾಗಿ ಜಿಲ್ಲಾಡಳಿತ ಶ್ರಮಿಸುತ್ತಿದೆ. ಅದಕ್ಕಾಗಿ ತಾವೆಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮತನಾಡಿ, ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ, ತಾಲ್ಲೂಕು ಬೀಟ್ ಮತ್ತು ಸರ್ಕಲ್ ಮಟ್ಟದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಕಳೆದ ಬಾರಿ ಜಿಲ್ಲೆಯಲ್ಲಿ 606 ಗಣೇಶ ಮೂರ್ತಿ ಸ್ಥಾಪಿಸಿದ್ದು, ಈ ಬಾರಿ ಅವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಗಣೇಶ ಪ್ರತಿಷ್ಠಾಪನೆ, ಪೆಂಡಾಲ್ ಹಾಕಲು, ಪ್ಲೆಕ್ಸ್, ಬಂಟಿಂಗ್ಸ್ ಅಳವಡಿಸಲು ಅನುಮತಿ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಸೂಚಿಸಿದರು.

ವಿಗ್ರಹ ಸ್ಥಾಪನೆ ವೇಳೆ ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಪೆಂಡಾಲ್‍ಗಳಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅಳವಡಿಸಬೇಕು, ಪ್ರತಿಷ್ಠಾಪನೆ ಆದಾಗಿನಿಂದ ವಿಸರ್ಜನೆವರೆಗೂ ಏನೇ ಸಮಸ್ಯೆಗಳು ಉಂಟಾದಲ್ಲಿ ಆಯೋಜಕರನ್ನೇ ನೇರ ಹೊಣೆಗಾರರನ್ನಾಗಿಸಲಾಗುವುದು. ಮೆರವಣಿಗೆ ವೇಳೆ ಸಮಸ್ಯೆಗಳಾದಂತೆ ಕ್ರಮ ವಹಿಸಬೇಕು.

ಜಿಲ್ಲೆಯಲ್ಲಿ 10ಸಾವಿರಕ್ಕೂ ಹೆಚ್ಚು cctv ಅಳವಡಿಸಲಾಗಿದೆ. ಹಬ್ಬದ ಸಂಭ್ರಮಾಚರಣೆ ವೇಳೆ ಶಾಂತಿ ಕದಡುವ ದೃಶ್ಯಗಳು ಕಂಡು ಬಂದಲ್ಲಿ ಸಂಬಂಧಪಟ್ಟವರ ಮೇಲೆ ಕಠಿಣ ಕ್ರಮವಹಿಸಲಾಗುವುದು ಎಂದು ಸೂಚಿಸಿದರು.

ಪ್ರಚೋದನೆ ಭಾಷಣಕ್ಕೆ ಅವಕಾಶವಿಲ್ಲ

ಎಲ್ಲೋ ಆಗಿರುವ ಘಟನೆಗಳ ಬಗ್ಗೆ ಪ್ರಚೋದನೆ ನೀಡುವ ಭಾಷಣ ಮಾಡುವಂತಿಲ್ಲ. ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪನೆ ಮಾಡಿ ಪ್ರಕೃತಿಗೆ ಉಳಿವಿಗೆ ಸಹಕರಿಸಬೇಕು. ವಿಸರ್ಜನೆಗೆ ಪ್ರತ್ಯಕೇವಾಗಿ ಸೂಚಿಸಿದ ಸ್ಥಳಗಳಲ್ಲಿಯೇ ವಿಸರ್ಜನೆ ಮಾಡಬೇಕು. ವಿಸರ್ಜನೆ ವೇಳೆ ಬಹಳಷ್ಟು ಜಾಗ್ರತೆ ವಹಿಸಬೇಕು. ವಿಸರ್ಜನೆ ವೇಳೆ ಜಿಲ್ಲಾಡಳಿತ ನೀಡಿದ ಮಾರ್ಗಗಳಲ್ಲಿಯೇ ಅನುಸರಿಸಿ ವಿಸರ್ಜನೆಗೆ ಕ್ರಮವಹಿಸಬೇಕು. ವಿಸರ್ಜನೆ ಹಾಗೂ ಆಚರಣೆ ವೇಳೆ ಕೆಲವರು ಕೋಮು ಗಲಭೆ, ಕಲಹ, ಶಾಂತಿ ಕದಡುವಂಥ ಕೆಲಸ ಮಾಡುತ್ತಿದ್ದಾರೆ. ಇಂತಹ ಆಸ್ಪದಗಳಿಗೆ ಅವಕಾಶ ನೀಡದೇ ಸಂತೋಷ ಸಡಗರದಿಂದ ಎಲ್ಲರೂ ಸೌಹಾರ್ಧತೆಯಿಂದ ಆಚರಿಸಬೇಕು. ಹಬ್ಬಗಳು ಸಡಗರ ಸಭ್ರಮದಿಂದ ಆಚರಣೆ ಮಾಡಲು ಇರುವುದು. ಈ ಸಂಭ್ರಮ ಸಡಗರ ಆಚರಣೆ ಶೋಕಾಚರಣೆಗಳಾಗಿ ಬದಲಾಗಬಾರದು. ಆದ್ದರಿಂದ ಆಯೋಜಕರು ಅತ್ಯಂತ ಜಾಗ್ರತೆ ವಹಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾಧವ ವಿಠ್ಠಲ ರಾವ್ ಮಾತನಾಡಿ, ಸಾರ್ವಜನಿಕರು ಈ ಎರಡು ಹಬ್ಬಗಳನ್ನು ಶಾಂತಿಯುತವಾಗಿ ಸರಿಯಾದ ರೀತಿಯಲ್ಲಿ ಆಚರಣೆ ಮಾಡಬೇಕು. ಪಂಚಾಯಿತಿ ಮಟ್ಟದಲ್ಲಿ ಆಯೋಜಿಸುವ, ಆಚರಣೆ ಮಾಡುವ ಪ್ರತಿಯೊಬ್ಬರೂ ಕಾಲಾವಧಿಗೂ ಮುಂಚಿತವಾಗಿ ಗ್ರಾಮ ಪಂಚಾಯತಿಗಳಲ್ಲಿ ಕಡ್ಡಾಯವಾಗಿ ಅನುಮತಿ ಪಡೆಯಲು ಸೂಚನೆ ನೀಡಿದರು. ಮುಂಬೈ, ಪುಣೆ ಮಾದರಿಯಲ್ಲಿ ಶಾಂತಿ ಮತ್ತು ಶಿಸ್ತಿನೊಂದಿಗೆ ಆಚರಣೆ ಅಗತ್ಯ. ಕಾನೂನಾತ್ಮಕ ಸೂಚನೆಗಳ ಕಡ್ಡಾಯ ಪಾಲನೆ ಮಾಡಬೇಕು. ಶಾಲೆ, ಅಂಗನವಾಡಿ, ಇನ್ನಿತರೆ ಸೂಕ್ಷ್ಮ ಪ್ರದೇಶಗಳಲ್ಲಿ ಆಚರಣೆ ಮಾಡಬಾರದು ಎಂದು ತಿಳಿಸಿದರು.

ಸಭೆಯಲ್ಲಿ ಎಎಸ್ಪಿ ಪರಮೇಶ್ವರ್ ಹೆಗಡೆ, ಎಡಿಸಿ ಶೀಲವಂತ ಶಿವಕುಮಾರ್, ಡಿವೈಎಸ್ಪಿ ಸ್ಯಾಮ್ ವರ್ಗೀಸ್, ಎಸಿ ಸಂತೋಷ್ ಪಾಟೀಲ್, ಪಾಲಿಕೆ ಆಯುಕ್ತೆ ರೇಣುಕಾ, ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸಾರ್ವಜನಿಕರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.ಗ್ರಾಮೀಣ ವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಸ್ವಾಗತಿಸಿದರು. ನಗರ ವಿಭಾಗದ ಡಿವೈಎಸ್ಪಿ ಬಸವರಾಜ ವಂದಿಸಿದರು. ಡಿಎಆರ್ ವಿಭಾಗದ ಡಿಎಸ್‍ಪಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top