ದಾವಣಗೆರೆ: ಬ್ಯಾಂಕುಗಳನಲ್ಲಿ ಭದ್ರತೆ ಇಲ್ಲಾವಾದರೆ ಸಾರ್ವಜನಿಕರು ಯಾರನ್ನು ನಂಬಬೇಕು. ಆದ್ದರಿಂದ ನಿಮ್ಮ ಬ್ಯಾಂಕಿನಲ್ಲಿ ಸರಿಯಾದ ಭದ್ರತೆಯ ಬಗ್ಗೆ ಹೆಚ್ಚಿನ ಗಮನವಿಡಬೇಕು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಸಂಭಾಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಬ್ಯಾಂಕರ್ ಗಳ ಭದ್ರತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬ್ಯಾಂಕುಗಳು ಜನರ ನಂಬಿಕೆ ಗಳಿಸಲು ಪಾರದರ್ಶಕತೆ, ನೈತಿಕತೆ ಮತ್ತು ಸ್ಪಷ್ಟ ಸಂವಹನಗಳಿಗೆ ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ನಿಮ್ಮ ಬ್ಯಾಂಕಿನ ಮಾಹಿತಿ ಭದ್ರತೆಯ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ನಿಮ್ಮ ನಿರ್ಲಕ್ಷ್ಯದಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಬ್ಯಾಂಕಿನ ನಿಯಮ ನಿಬಂಧನೆಗಳನ್ನು ಬ್ಯಾಂಕಿನ ಅಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದರು.
ಬ್ಯಾಂಕುಗಳು ತಮ್ಮ ಮುಖ್ಯ ಕೆಲಸವಾದ ಸಾಲ ವಿತರಣೆಯ ಬಗ್ಗೆ ಗಮನಹರಿಸಬೇಕು. ಪ್ರಸ್ತುತ ಬಡ್ಡಿ ದರಗಳು ಜನರಿಗೆ ತೀರಾ ಕಷ್ಟಕರ ಎನಿಸಿವೆ. ಹೀಗಾಗಿ ಬಡ್ಡಿದರಗಳನ್ನು ಬ್ಯಾಂಕುಗಳು ಜನರ ಕೈಗೆಟುಕುವಂತೆ ಮಾಡಬೇಕು ಎಂದು ತಿಳಿಸಿದರು.
ಸಾರ್ವಜನಿಕರಿಗೆ ನೀವು ದಾರಿದೀಪವಾಗಬೇಕು ನಿಮ್ಮಲ್ಲೇ ಇಂತಹ ತೊಡಕುಗಳು ಕಂಡು ಬಂದಲ್ಲಿ ಜನರು ಯಾರನ್ನು ನಂಬಬೇಕು ಹಾಗಾಗಿ ಜನರ ನಂಬಿಕೆಗಾಗಿ ಕೆಲಸವನ್ನು ಮಾಡಿ, ನಿಮ್ಮ ಬ್ಯಾಂಕಿನ ಭದ್ರತೆಯನ್ನು ಗಟ್ಟಿಗೊಳಿಸಿ ಎಂದು ತಿಳಿಸಿದರು.
ಬ್ಯಾಂಕ್ ವ್ಯವಹಾರ ಸಾರ್ವಜನಿಕರಿಗೆ ಅನುಕೂಲವಾಗಬೇಕು, ಹೃದಯವಂತಿಕೆಯಿಂದ ಜನರಿಗೆ ಸಾಲದ ವಿವರಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ. ಅವರುಗಳಿಗೆ ಸಮಯಕ್ಕೆ ತಿರಿಸಲಿಲ್ಲವೆಂದರೆ ಒಂದೆರಡು ತಿಂಗಳ ಕಾಲಾವಕಾಶ ನೀಡಬೇಕು ಎಂದು ತಿಳಿಸಿದರು.
ಎಸ್ಪಿ ಉಮಾ ಪ್ರಶಾಂತ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ ಇಟ್ನಾಳ್, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ವಿಜಯಕುಮಾರ್ ಎಂ ಸಂತೋಷ್, ಲೀಡ್ ಬ್ಯಾಂಕ್ ಮ್ಯಾನೇಜರ್ ಸಿದ್ದಾರ್ಥ್ ,ಪೊಲೀಸ್ ಸಿಬ್ಬಂದಿಗಳು , ಬ್ಯಾಂಕ್ ಸಿಬ್ಬಂದಿಗಳು ಹ ಉಪಸ್ಥಿತರಿದ್ದರು.