ದಾವಣಗೆರೆ: ಜಿಲ್ಲೆಯ ವಿವಿಧ ಚೆಕ್‌ಪೋಸ್ಟ್‌ಗಳಲ್ಲಿ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಇದುವರೆಗೆ 46 ಲಕ್ಷದ ನಗದು ಹಾಗೂ 48 ಲಕ್ಷ ಮೌಲ್ಯದ ವಿವಿಧ ವಸ್ತುಗಳನ್ನು ಸ್ಟಾಟಟಿಕ್ ಸರ್ವೆಲೆನ್ಸ್ ಟೀಮ್ (ಎಸ್‌ಎಸ್‌ಟಿ) ವಶಪಡಿಸಿಕೊಂಡಿದೆ. ವಶಪಡಿಸಿಕೊಂಡ 46,01,648 ಲಕ್ಷ ನಗದಿನಲ್ಲಿ 32.32 ಲಕ್ಷವನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಮಾಹಿತಿ ನೀಡಿದರು.
48 ಲಕ್ಷ ಮೌಲ್ಯದ ವಸ್ತುಗಳು ವಶ: ಹರಿಹರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 9.26 ಲಕ್ಷ ಮೌಲ್ಯದ 145 ಬಂಡಲ್ ಹಾಲಿನ ಸ್ಟೀಲ್ ಕ್ಯಾನ್‌ಗಳು ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ 39 ಲಕ್ಷ ಮೌಲ್ಯದ 66.786 ಕೆ.ಜಿ. ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಬಕಾರಿ ಇಲಾಖೆಯವರು 3.63 ಲಕ್ಷ ಮೌಲ್ಯದ 931.36 ಲೀಟರ್ ಮದ್ಯ ಹಾಗೂ 56,011 ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲೆಯಾದ್ಯಂತ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಜಾರಿಗೊಳಿಸಲು ವಿವಿಧ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಒಟ್ಟು 21 ಫ್ಲೈಯಿಂಗ್ ಸ್ಕ್ವಾಡ್, 37 ಎಸ್‍ಎಸ್‍ಟಿ ತಂಡ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. 9 ಅಬಕಾರಿ ತಂಡಗಳೂ ಜಿಲ್ಲೆಯಲ್ಲಿ ನಿಗಾವಹಿಸಿವೆ
ಎಂದರು.



