ದಾವಣಗೆರೆ: ಇಂದು (ಮಾ.20) ಚನ್ನಗಿರಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಹಾಗೂ ರಾಜಗೊಂಡನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚನ್ನಗಿರಿ ಕ್ಷೇತ್ರ ಶಾಸಕರು ಹಾಗೂ ಕೆ.ಎಸ್.ಡಿ.ಎಲ್. ಅಧ್ಯಕ್ಷರಾದ ಕೆ.ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಗ್ರಾಮವಾಸ್ತವ್ಯ ಮಾಡಲಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಾರ್ವಜನಿಕರು ಕಂದಾಯ ಇಲಾಖೆ ಹಾಗೂ ಉಳಿದ ಇಲಾಖೆಗಳಿಂದ ಸೌಲಭ್ಯಗಳನ್ನು ಪಡೆಯಲು ಇಚ್ಚಿಸುವವರು ಅಗತ್ಯ ದಾಖಲೆಗಳೊಂದಿಗೆ ಸಂಬಂಧಪಟ್ಟ ಪಿಡಿಓ ಮತ್ತು ವಿ.ಎ ಗಳಿಗೆ ಅರ್ಜಿ ಸಲ್ಲಿಸಬೇಕು.
ಹಳ್ಳಿಗಳ ಭೇಟಿ ಸಮಯ : ಜಿಲ್ಲಾಧಿಕಾರಿಗಳು ಬೆಳಿಗ್ಗೆ 10.30ಕ್ಕೆ ಮಲ್ಲಿಗೆರೆ, 11ಕ್ಕೆ ಲಕ್ಷ್ಮೀಸಾಗರ, 11.15ಕ್ಕೆ ದಿಗ್ಗೇನಹಳ್ಳಿ, 11.45ಕ್ಕೆ ಮಹಾತ್ಮ ಗಾಂಧಿನಗರ, 12ಕ್ಕೆ ತಿಪ್ಪಗೊಂಡನಹಳ್ಳಿ, ಮಧ್ಯಾಹ್ನ 12.15ಕ್ಕೆ ರಾಜಗೊಂಡನಹಳ್ಳಿ, 12.20ಕ್ಕೆ ರೊಪ್ಪದಹಟ್ಟಿ, 12.40ಕ್ಕೆ ಟಿ.ಗೊಲ್ಲರಹಟ್ಟಿ, 1 ಗಂಟೆಗೆ ದಂಡಿಗೇನಹಳ್ಳಿ, 1.20ಕ್ಕೆ ರಾಜಗೊಂಡನಹಳ್ಳಿ ತಾಂಡ, 3 ಗಂಟೆಗೆ ಮರಳಹಟ್ಟಿ, 3.30ಕ್ಕೆ ಗಂಡುಗನಹಂಕಲು ಗ್ರಾಮಗಳಿಗೆ ಭೇಟಿ ನೀಡಲಿದ್ದಾರೆ.
ಸಂಜೆ.4.30 ಕ್ಕೆ ಮಾವಿನಹೊಳೆಯ ಸಮುದಾಯ ಭವನದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಜೆ 6 ರಿಂದ 9 ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಚನ್ನಗಿರಿ ತಾಲ್ಲೂಕು ತಹಶೀಲ್ದಾರ ಪುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



