ದಾವಣಗೆರೆ: ರಾಜ್ಯ ಚುನಾವಣಾ ಆಯೋಗ ದಾವಣಗೆರೆ ಮಹಾನಗರಪಾಲಿಕೆಯ ವಾರ್ಡ್ ಸಂಖ್ಯೆ 27- ಭಗತ್‍ಸಿಂಗ್ ನಗರ ಹಾಗೂ 38-ಕೆ.ಇ.ಬಿ ಕಾಲೋನಿಯಲ್ಲಿ ಉಪಚುನಾವಣೆ ನಡೆಸಲು ಉದ್ದೇಶಿಸಿದ್ದು, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಇತ್ತೀಚೆಗೆ 27ನೇ ವಾರ್ಡ್ ನ ಜೆ.ಎನ್ ಶ್ರೀನಿವಾಸ್ ಹಾಗೂ 38 ನೇ ವಾರ್ಡ್ ನ ಶ್ವೇತಾ ದಂಪತಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.
ಮೇ.02 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಾಗುವುದು. ಮೇ.09 ರಂದು ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನ. ಮೇ.10 ರಂದು ನಾಮಪತ್ರಗಳನ್ನು ಪರಿಶೀಲಿಸಲು ಕೊನೆಯ ದಿನ. ಮೇ.12 ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯದಿನ. ಮೇ.20 ರಂದು ಮತದಾನ ಅಗತ್ಯವಿದ್ದರೆ, ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ಮತದಾನ ನಡೆಸಲಾಗುವುದು. ಮೇ.21 ರಂದು ಮರು ಮತದಾನ ಇದ್ದಲ್ಲಿ ಮತದಾನ ನಡೆಸಲಾಗುವುದು. ಮೇ.22 ರಂದು ಬೆಳಿಗ್ಗೆ 8 ಗಂಟೆಯಿಂದ ಮತಗಳ ಎಣಿಕೆ ಮಾಡಲಾಗುವುದು.
ವಾರ್ಡ್ ಸಂಖ್ಯೆ-28 ಭಗತ್ ಸಿಂಗ್ ನಗರ, ಸಾಮಾನ್ಯ, ವಾರ್ಡ್ ಸಂಖ್ಯೆ-37 ಕೆ.ಇ.ಬಿ ಕಾಲೋನಿ ಸಾಮಾನ್ಯ ಮಹಿಳೆ ಮೀಸಲಾತಿ ನಿಗಧಿಯಾಗಿರುತ್ತದೆ. ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಗಳು : ರೇಷ್ಮಾ ಹಾನಗಲ್ ವಿಶೇಷ ಭೂಸ್ವಾಧೀನ ಅಧಿಕಾರಿಗಳು ಕೊಟ್ಟೂರು-ಹರಿಹರ ರೈಲ್ವೆ ಬ್ರಾಡ್ ಗೇಜ್‍ಲೈನ್ ಯೋಜನೆಯ ಮೊ.ಸಂ: 9481039449 ಇವರು ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾರೆ. ಸಹಾಯಕ ಚುನಾವಣಾ ಅಧಿಕಾರಿಯಾಗಿ ಉಪ ವಿಭಾಗಾಧಿಕಾರಿಗಳ ಕಚೇರಿಯ ತಹಶೀಲ್ದಾರ್ ಗ್ರೇಡ್-2 ಗಿರೀಶ್ ಬಾಬು ಮೊ.ಸಂ: 9483770354 ನ್ನು ಸಂಪರ್ಕಿಸಬಹುದು ವಾರ್ಡ್ ಸಂಖ್ಯೆ 28 ಮತ್ತು 37ರ ನಾಮಪತ್ರಗಳನ್ನು ಕೊಠಡಿ ಸಂಖ್ಯೆ-02, ಮಹಾನಗರಪಾಲಿಕೆ ಕಾರ್ಯಾಲಯ, ದಾವಣಗೆರೆ ಇಲ್ಲಿ ಸ್ವೀಕರಿಸಲಾಗುವುದೆಂದು ಪಾಲಿಕೆಯ ಆಯುಕ್ತರಾದ ವಿಶ್ವನಾಥ್ ಮುದ್ದಜ್ಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



