ದಾವಣಗೆರೆ: ಇತಿಹಾಸ ಪ್ರಸಿದ್ಧ ಶ್ರೀಕ್ಷೇತ್ರ ಆನೆಕೊಂಡದಲ್ಲಿ ಶ್ರಾವಣ ಮಾಸದ ಕಡೇ ಸೋಮವಾರ ಬಸವೇಶ್ವರ ಸ್ವಾಮಿ ಕಾರ್ಣಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಸವೇಶ್ವರ ಸ್ವಾಮಿ, ನೀಲಾನಹಳ್ಳಿ ಆಂಜನೇಯ ಸ್ವಾಮಿ, ನಿಟುವಳ್ಳಿಯ ದುರ್ಗಾಂಬಿಕಾ ದೇವಿ ಮೆರವಣಿಗೆ ನಡೆಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಕಾರ್ಣಿಕವು ನಡೆಯಿತು.
ರಾಮ ರಾಮ ಎಂದು ನುಡಿದೀತಲೇ
ಶೃಂಗಾರದ ಗಿಳಿಗೆ ಮಹಾತಾಯಿ ಆಶೀರ್ವಾದ ಮಾಡ್ಯಾಳಲೇ
ನರಲೋಕದ ಜನಕ್ಕೆ ಆನೆ ಮುತ್ತಿನುಂಡೆ, ಕೊಟ್ಟಿತಲೇ
ದೇಶದ ಮೇಲೆ ಹಾನಿಗಳ ಮೇಲೆ ಹಾನಿ ಆದೀತಲೇ ಎಚ್ಚರ….! ಎಂದು ಕಾರ್ಣಿಕ ನುಡಿಯುತ್ತಿದ್ದಂತೆ ನೆರೆದಿದ್ದ ಸಾವಿರಾರು ಭಕ್ತರು ಭಕ್ತಿ ಸ್ವಾಮಿಗೆ ನಮಿಸಿದರು.