ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ರೈತ ಮಹಿಳೆಯರಿಗೆ ಹೈನುಗಾರಿಕೆಯಲ್ಲಿ ಪ್ರೋತ್ಸಾಹಿಸಲು ಹಸು, ಎಮ್ಮೆ ಖರೀದಿಗೆ ಪಡೆಯುವ ಸಾಲದ ಮೇಲಿ ಬಡ್ಡಿಯನ್ನು ಸಕಾಲದಲ್ಲಿ ಮರುಪಾವತಿ ಮಾಡುವ ಮಹಿಳಾ ಫಲಾನುಭವಿಗಳಿಗೆ (ಪ್ರತಿ ಜೂನ್-30, ಸೆಪ್ಟೆಂಬರ್-30, ಡಿಸೆಂಬರ್-30, ಮಾರ್ಚ್ 31) ಸರ್ಕಾರದಿಂದ ಶೇ.9ರ ಪ್ರತಿ ತ್ರೈಮಾಸಿಕಕ್ಕೆ ಬಡ್ಡಿ ಸಹಾಯಧನ ನೀಡುವ ಯೋಜನೆ ಜಾರಿಯಲ್ಲಿದೆ.
ದಾವಣಗೆರೆ ಜಿಲ್ಲೆಯ ತಾಲ್ಲೂಕುಗಳಿಗೆ ಮರು ಹಂಚಿಕೆ ಮಾಡಲಾದ ಗುರಿಗಳಂತೆ ಅರ್ಹ ಫಲಾನುಭವಿಗಳು ಹೆಚ್ಚಿನ ಮಾಹಿತಿಯನ್ನು ಆಯಾ ತಾಲ್ಲೂಕು ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ) ಗಳ ಮೂಲಕ ಮತ್ತು ಸ್ಥಳೀಯ ವಶುವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು.
ಚನ್ನಗಿರಿ ತಾಲ್ಲೂಕಿನ ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9880961745, ದಾವಣಗೆರೆ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9353567572, ಹರಿಹರ ತಾಲ್ಲೂಕು ಪಶು ಆಸ್ಪತ್ರೆ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9900369113, ಹೊನ್ನಾಳಿ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9480506320, ಜಗಳೂರು ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9901641942, ನ್ಯಾಮತಿ ತಾಲ್ಲೂಕು ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಮೊ.ಸಂ: 9632916405 ಸಂಪರ್ಕಿಸಲು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ. ಚಂದ್ರಶೇಖರ, ಎಸ್. ಸುಂಕದ ತಿಳಿಸಿದ್ದಾರೆ.



