ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಸ್ವಚ್ಛ ನಗರದ ಕನಸು ಕಾರಗೊಳ್ಳಬೇಕೆಂದರೆ ನಗರದ ಪ್ರತಿಯೊಂದು ವಾರ್ಡ್ ಗಳಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಪದ್ದತಿಗಳನ್ನು ಅಳವಡಿಸಿ ಕೊಳ್ಳಬೇಕಾಗಿದೆ. ಈ ಕಾರ್ಯಕ್ಕೆ ಜನರ ಸಹಕಾರ ಅಗತ್ಯವಾಗಿದೆ ಎಂದು ಮೇಯರ್ ಅಜಯ್ ಕುಮಾರ್ ಹೇಳಿದರು.
ನಗರದ 24 ನೇ ವಾರ್ಡಿನ ಕಾರ್ಪೊರೇಟರ್ ಹಾಗು ಆರ್ಥಿಕ ಸ್ಥಾಯಿ ಸಮಿತಿಯ ಅಧ್ಯಕ್ಷ ಪ್ರಸನ್ನ ಕುಮಾರ್ ವಾರ್ಡ್ ನಲ್ಲಿ ವೈಜ್ಞಾನಿಕ ಕಸ ವಿಭಜನೆಯ ಕೆಂಪು ಹಾಗು ಹಸಿರು ಬಣ್ಣದ ಬಕೆಟ್ ವಿತರಿಸಿ ಮಾತನಾಡಿದರು.
ವಾರ್ಡಿನ ಮನೆ-ಮನೆಗಳಿಗೂ ವೈಜ್ಞಾನಿಕವಾಗಿ ಕಸವನ್ನು ವಿಂಗಡಿಸಲು ಪ್ರಾಯೋಗಿಕವಾಗಿ ಒಟ್ಟು 300 ಮನೆಗಳನ್ನು ಗುರುತಿಸಿದ್ದು, ಹಸಿ ಕಸ ಮತ್ತು ಒಣ ಕಸವನ್ನು ವಿಂಗಡಿಸಲು ಎರಡು ಬಕೆಟ್ ಗಳನ್ನು ನೀಡಿ ಜಾಗೃತಿ ಮೂಡಿಸಲಾಗುತ್ತಿದೆ. ಯುವ ಅವನಿ ಹಸಿರು ಪ್ರತಿಷ್ಠಾನ ಈ ಒಂದು ಕಾರ್ಯದಲ್ಲಿ ಅವರೊಂದಿಗೆ ಕೈಜೋಡಿಸಲಿದೆ. ಪಾಲಿಕೆ ಸದಸ್ಯ ಪ್ರಸನ್ನ ಕುಮಾರ್ ಹಾಗೂ 24 ನೇ ವಾರ್ಡಿನ ಕೆಲ ನಿವಾಸಿಗಳು ಡಸ್ಟ್ ಬಿನ್ ಖರೀದಿಗೆ ಸಹಕಾರ ನೀಡಿದ್ದಾರೆ. ಈ ಕಾರ್ಯವನ್ನು ಯಶನ್ವಿಗೊಳಿಸಲು ಹಿರಿಯರು, ಮಹಿಳೆಯರು ಹಾಗು ಯುವಕರ ಸಹಕಾ ಅಗತ್ಯವಿದೆ, ನಮ್ಮೊಂದಿಗೆ ಈ ಅಭಿಯಾನದಲ್ಲಿ ಕೈಜೋಡಿಸಿ ಎಂದರು.
ಈ ಸಂದರ್ಭದಲ್ಲಿ ಆಯುಕ್ತ ವೀಶ್ವನಾಥ್ ಮುದ್ದಜ್ಜಿ, ಮಾಜಿ ಮೇಯರ್ ಸುಧಾ ಜಯರುದ್ರೇಶ್, ವಾರ್ಡಿನ ಪ್ರಮುಖರಾದ ಜಯರುದ್ರೇಶ್, ಬಿಜೆಪಿ ಯುವ ಮುಖಂಡ ಶ್ರೀನಿವಾಸ್ ದಾಸಕರಿಯಪ್ಪ, ವಾರ್ಡಿನ ಮುಖಂಡರಾ ಪದ್ಮನಾಭ ಶೆಟ್ರು, ಜೆ ಕಿರಣ ಕುಮಾರ್, ಡಾ.ಅಶ್ವಿನ್, ಸಚಿನ್ ವರ್ಣೇಕರ್ ಇದ್ದರು.



