ದಾವಣಗೆರೆ: ಕೃಷಿ ಉದ್ದೇಶದಲ್ಲಿ ಸಾಲ ಪಡೆದು ಸುಸ್ತಿದಾರರಾಗಿರುವ ಸಾಲಗಾರರು ಸರ್ಕಾರ ಬಡ್ಡಿ ಮನ್ನಾ ಯೋಜನೆ ನೀಡಿದಾಗ್ಯೂ ಪಡೆದ ಸಾಲವನ್ನು ಪಾವತಿಸದೆ ನಿರ್ಲಕ್ಷ್ಯ ವಹಿಸಿದ ಸಾಲಗಾರರು ಮಾ.31 ರೂಳಗೆ ಪೂರ್ತಿ ಸುಸ್ತಿ ಹಾಗೂ ಕಂತಿನ ಹಣ ಪಾವತಿಸಬೇಕು ಎಂದು ಸೂಚಿಸಲಾಗಿದೆ.
ಬ್ಯಾಂಕಿನಿಂದ ಕೃಷಿ ಉದ್ದೇಶಗಳಿಗೆ ಸಾಲ ಪಡೆದು ಇದೇ ತಿಂಗಳ ಅಂತ್ಯಕ್ಕೆ ದಿನಾಂಕ: 31-03-2021ರೊಳಗೆ ಶೇ. 3% ಬಡ್ಡಿ ದರದಲ್ಲಿ ಕಂತಿನ ಹಣ ಪಾವತಿಸಿದಲ್ಲಿ ಮಾತ್ರ ಸರ್ಕಾರದ ಬಡ್ಡಿ ರಿಯಾಯ್ತಿ ತಮಗೆ ದೊರೆಯುತ್ತದೆ. ತಪ್ಪಿದಲ್ಲಿ ಪೂರ್ತಿ ಬಡ್ಡಿಯೊಂದಿಗೆ ಇತರೇ ವೆಚ್ಚಗಳೊಂದಿಗೆ ಪಾವತಿಸಬೇಕಾಗುತ್ತದೆ. ಕಾರಣ ಸರ್ಕಾರದ ರಿಯಾಯಿತಿ ಪಡೆದು ತಕ್ಷಣ ಕಂತಿನ ಹಣ ಪಾವತಿಸಲು ಸೂಚಿಸಿದೆ. ತಪ್ಪಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
ರೈತರು ಇಂತಹ ಕ್ರಮಗಳಿಗೆ ಅವಕಾಶ ನೀಡದೆ ತಕ್ಷಣ ಈ ಸುಸ್ತಿ ಮೊತ್ತ ಪಾವತಿಸಿ ಶೇ. 3 ರ ಬಡ್ಡಿ ದರದಲ್ಲಿ ಹೊಸ ಸಾಲ ಪಡೆದುಕೊಳ್ಳುವಂತೆ ಜಗಳೂರು ತಾಲ್ಲೂಕಿನ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ದಿ ಬ್ಯಾಂಕ್ ಅಧ್ಯಕ್ಷರಾದ ಕೆ.ಬಿ. ಸಿದ್ದೇಶ್ ಹಾಗೂ ವ್ಯವಸ್ಥಾಪಕ ಟಿ.ಎನ್ ಭೂಷಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.